ನಾಪೋಕ್ಲು ಫೆ.26 NEWS DESK : ಬಲ್ಲಮಾವಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲ್ಲತ್ ನಾಡು-ಪೇರೂರು ಇಗ್ಗುತಪ್ಪ ದೇವಾಲಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.
ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ , ಗ್ರಾ.ಪಂ ಸದಸ್ಯ ಮಚುರ ರವೀಂದ್ರ ಪ್ರಾರ್ಥನೆ ಸಲ್ಲಿಸಿ, ಮಾತನಾಡಿ ಶಾಸಕರ ಅನುದಾನ 5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಮರಿಕರಣ ಮಾಡಲು ಉದ್ದೇಶಿಸಿದ್ದು ಮಾರ್ಚ್ ತಿಂಗಳಲ್ಲಿ ಶಿವರಾತ್ರಿ ಉತ್ಸವದಂದು ದೇವಾಲಯದ ವಾರ್ಷಿಕೋತ್ಸವ ನಡೆಯಲಿದೆ. ಅದರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.
ಶಾಸಕ ಎ.ಎಸ್ ಪೊನ್ನಣ್ಣ ಮಾತನಾಡಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಡಾಮರಿಕರಣವನ್ನು ಸದ್ಯದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ತೆನ್ನಿ ರ ಮೈನಾ, ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಬ್ಲಾಕ್ ಕಾಂಗ್ರೆಸ್ ನಾಪೋಕ್ಲು ವಲಯ ಅಧ್ಯಕ್ಷ ಮಾಚೇಟಿರ ಕುಸು ಕುಶಾಲಪ್ಪ, ಬಟ್ಟಕಾರಂಡ ಮುತ್ತಣ್ಣ , ಗ್ರಾ.ಪಂ ಸದಸ್ಯ ಕೋಡಿಯಂಡ ರಜನಿ, ಮಣವಟ್ಟಿರ ಕುಶಾಲಪ್ಪ ,ತಾಪ೦ಡ ಅಪ್ಪಣ್ಣ, ಚಂಗೇಟಿರ ಕುಶಾಲಪ್ಪ, ಚಿರೋಟಿರ ಮಾಚಯ್ಯ , ಅಪ್ಪಚಟ್ಟೋಳಂಡ, ಶಾಮ್ ಕಾಳಯ್ಯ, ಚಂಗೆಟ್ಟಿರ ಮುತ್ತಣ್ಣ ,ಪಾಲೆಯಡ ಅಪ್ಪಣ್ಣ, ಪಾಲೆಯಡ ಅಯ್ಯಪ್ಪ , ಮಣವಟ್ಟಿರ ಪಾಪು ಚಂಗಪ್ಪ, ಅಪ್ಪಚಟ್ಟೋಳಂಡ ಮಿಥುನ್ ಮಾಚಯ್ಯ, ಮನವಟ್ಟಿರ ದಯಾ ಕುಟ್ಟಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.