ಮಡಿಕೇರಿ ಡಿ.4 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿ ನ 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ತೃತೀಯ ಬಿ.ಎ ವಿದ್ಯಾರ್ಥಿ ಎನ್.ವಿ.ಮಹೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾನೆ. ಕಾಲೇಜು ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ತರಗತಿ ಪ್ರತಿನಿಧಿಗಳು ಮತದಾನ ಮಾಡಿ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಟಿ.ಎಸ್.ಆಲಿನ್ ಜೇಶ್ಮ (ತೃತೀಯ ಬಿ.ಎ ಎಚ್ ಆರ್ ಡಿ), ಕಾರ್ಯದರ್ಶಿಯಾಗಿ ಎಂ.ಪಿ.ಮೊನಿಶ್ (ತೃತೀಯ ಬಿ.ಬಿ.ಎ), ಜಂಟಿ ಕಾರ್ಯದರ್ಶಿಯಾಗಿ ರಾಹುಲ್ ರಾಜನ್ (ದ್ವಿತೀಯ ಬಿ.ಎಸ್.ಸಿ) ಮತ್ತು ಕೆ.ಟಿ.ವರ್ಷ (ದ್ವಿತೀಯ ಬಿ.ಎಸ್.ಸಿ), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೆ.ಫರ್ದೀನ್ (ತೃತೀಯ ಬಿ.ಎ) ಮತ್ತು ಜಿ.ಹೆಚ್.ಐಶ್ವರ್ಯ (ತೃತೀಯ ಬಿ.ಎ) ಆಯ್ಕೆಯಾದರು. ಚುನಾವಣೆ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮೇಜರ್ ಬಿ.ರಾಘವ, ಉಪನ್ಯಾಸಕರುಗಳಾದ ಡಾ.ನಯನ ಕಶ್ಯಪ್, ಡಾ.ರೇಣುಶ್ರೀ, ನಾಗೇಂದ್ರ, ಡಾ.ಶ್ರೀಧರ್ ಹೆಗಡೆ, ತಳವಾರ್, ಪೂಣಚ್ಚ, ಡಾ.ಮಹದೇವಯ್ಯ, ಖುರ್ಷಿದ ಬಾನು ಉಪಸ್ಥಿತರಿದ್ದರು.