ಸೋಮವಾರಪೇಟೆ ಡಿ.4 NEWS DESK : ಕ್ಲಬ್ ರಸ್ತೆಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಲೇಸರ್ ಚಿಕಿತ್ಸೆಯನ್ನು ಒಳಗೊಂಡ ವಿ ಕೇರ್ ಸೂಪರ್ ಸ್ಪೆಷಾಲಿಟಿ ದಂತ ಚಿಕಿತ್ಸಾ ಕೇಂದ್ರವನ್ನು ಮಾಜಿ ಕ್ರೀಡಾ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಕೊಡ್ಲಿಪೇಟೆ ಕಿರಿಕೂಡ್ಲಿ ಮಠಾದೀಶರಾದ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭ ಡಾ.ವೈಭವಕೆಂಚಾಂಬ, ಡಾ.ಸವನ್ ರಮೇಶ್, ಡಾ. ತುಷಾರ ಆರ್.ದಾಸ್ ಹಾಗೂ ಮುಂತಾದವರು ಹಾಜರಿದ್ದರು. ಈಗಾಗಲೇ ಬೆಂಗಳೂರು, ಹಾಸನ, ಬೆಳ್ಳೂರು ಕ್ರಾಸ್ ಹಾಗೂ ಕೊಡ್ಲಿಪೇಟೆಯಲ್ಲಿ ತನ್ನ ಶಾಖೆಯನ್ನು ಹೊಂದಿರುವ ವಿ ಕೇರ್ ಆಸ್ಪೀಟಲ್ ಗ್ರೂಪ್ ಸೋಮವಾರಪೇಟೆಯಲ್ಲೂ ಜನ ಸಾಮಾನ್ಯರಿಗೆ ಸೇವೆ ನೀಡುವ ಉದ್ದೇಶದಿಂದ ಆರಂಭಿಸಲಾಗುತ್ತಿದೆ ಎಂದು ಡಾ.ವೈಭವ್ ತಿಳಿಸಿದ್ದಾರೆ.