ಸುಂಟಿಕೊಪ್ಪ ಡಿ.4 NEWS DESK : ಕರ್ನಾಟಕ ಏಡ್ಸ್ ಪ್ರಿವೇನ್ಸ್ ಸೊಸೈಟಿ, ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಶೋದಯದ ಸಂಯುಕ್ತಾಶ್ರಯದಲ್ಲಿ ಸುಂಟಿಕೊಪ್ಪದಲ್ಲಿ ಹೆಚ್‍ಐವಿ ಸೋಂಕಿನ ಕುರಿತು ಸಾರ್ವಜನಿಕರಿಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ಸುಂಟಿಕೊಪ್ಪ ವಾಹನ ಚಾಲಕರ ವೇದಿಕೆಯ ಮುಂಭಾಗದಲ್ಲಿ ಮಂಡ್ಯದ ಚಿಂತನ ಸಾಂಸ್ಕøತಿಕ ಕಲಾ ತಂಡದವರು ಹೆಚ್‍ಐವಿ ಕುರಿತು ಸಾರ್ವಜನಿಕರಿಗೆ ಬೀದಿ ನಾಟಕವನ್ನು ಪ್ರದರ್ಶಿಸುವ ಮೂಲಕ ಹೆಚ್‍ಐವಿ ಸೋಂಕಿತರು ಹೆದರುವ ಅವಶ್ಯಕತೆ ಇಲ್ಲ. ಸೂಕ್ತ ಸಮಯದಲ್ಲಿ ಸರಕಾರಿ ಆಸ್ಪತ್ರೆಗಳಿಗೆ ತೆರಳಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡು ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯುವುದರೊಂದಿಗೆ ಈ ರೋಗವನ್ನು ತಡೆಗಟ್ಟಬಹುದು ಎಂದು ಮನವರಿಗೆ ಮಾಡಿದರು. ಆಶೋದಯ ಕಾರ್ಯಕರ್ತರು ಮತ್ತು ಇಲಾಖೆ ಸಿಬ್ಬಂದಿಗಳು ಸೋಂಕಿತರ ಭೇಟಿ ನೀಡಿದಾಗ ಅವರೊಂದಿಗೆ ಸಹಕರಿಸುವುದರ ಜೊತೆಗೆ ಅವರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸದ್ದಲ್ಲಿ ಈ ರೋಗವನ್ನು ಯಾವುದೇ ಭಯವಿಲ್ಲದೆ ತಡೆಗಟ್ಟಲು ಸಾಧ್ಯವೆಂದು ಜಾಗೃತಿ ಮೂಡಿಸಿದರು. ಈ ಸಂದರ್ಭ ಜಿಲ್ಲಾ ಆಶೋದಯ ಕಾರ್ಯಕರ್ತೆ ನಾಗರತ್ನ ಸುರೇಶ್, ಮಂಡ್ಯದ ಸಿಂಚನ ಸಾಂಸ್ಕøತಿಕ ಕಲಾ ತಂಡದವರು ಇದ್ದರು.