ಮಡಿಕೇರಿ ಫೆ.26 NEWS DESK : ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲಾದ ಘಟನೆ ಕುಶಾಲನಗರದ ಕಣಿವೆಯಲ್ಲಿ ನಡೆದಿದೆ. ಮೈಸೂರು ಮೂಲದ ವಿದ್ಯಾರ್ಥಿ ಹೃತ್ವಿಕ್ (16) ಮೃತ ದುರ್ದೈವಿ. ಪಿರಿಯಾಪಟ್ಟಣ ತಾಲ್ಲೂಕಿನ ಚೆನ್ನಕೇಶವಪುರದ ತನ್ನ ಸ್ನೇಹಿತನ ಮನೆಗೆ ಭಾನುವಾರ ಬಂದಿದ್ದ ಹೃತ್ವಿಕ್ ಬೆಟ್ಟದಪುರದ ಜಾತ್ರೆಯಲ್ಲಿ ಪಾಲ್ಗೊಂಡಿದ್ದ. ಬಳಿಕ ಸೋಮವಾರ ಸ್ನೇಹಿತರೊಂದಿಗೆ ಕೂಡಿಗೆ ಬಳಿಯ ಕಣಿವೆ ಗ್ರಾಮಕ್ಕೆ ಆಗಮಿಸಿದ್ದ ಎನ್ನಲಾಗಿದೆ. ಸ್ನೇಹಿತರ ಜೊತೆ ಕಾವೇರಿ ನದಿಯಲ್ಲಿ ಈಜಲು ತೆರಳಿದ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತದೇಹವನ್ನು ಮೇಲೆತ್ತುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









