Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*
  • *16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*
  • *ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*
  • *ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*
  • *ಸಂಭ್ರಮದಿಂದ ಜರುಗಿದ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ. ಮೈಸೂರು ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ರವರ ನೇತೃತ್ವದಲ್ಲಿ ಜರುಗಿದ ದಿವ್ಯ ಬಲಿಪೂಜೆ*
  • *ಫೆ.15 ರಂದು ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ*
  • *ಬೆಂಗಳೂರಿನ ಪ್ರತಿಷ್ಠಿತ ಕೊಡಗು ಗೌಡ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ*
  • *ನಂದಿಬೆಟ್ಟದ ಗೇಟ್ ಬಂದ್! ಫೆಬ್ರವರಿ 14 ರಂದು ಪ್ರೇಮಿಗಳ ಪ್ರವೇಶಕ್ಕೆ ನಿರ್ಬಂಧ*
  • *ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ: ಗ್ಯಾರಂಟಿ ಯೋಜನೆಗಳ ಕಥೆಯೇನು? ಸಂಪುಟ ಸಭೆಯ ಈ 5 ಪ್ರಮುಖ ನಿರ್ಧಾರಗಳನ್ನು ಮಿಸ್ ಮಾಡ್ಬೇಡಿ!*
  • *ಸಂತೋಷವಾಗಿ ಹೊರಟವರು ಮಸಣ ಸೇರಿದರು! ಪೋಷಕರ ಆಸೆಗಳನ್ನು ಮಣ್ಣು ಮಾಡಿದ ಆ ಒಂದು ಕ್ಷಣದ ಅಚಾತುರ್ಯವೇನು?*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ವಿರಾಜಪೇಟೆಯಲ್ಲಿ ಶಿವ ಜಯಂತಿ ಮಹೋತ್ಸವ : ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನ ಮತ್ತು ಆಧ್ಯಾತ್ಮಿಕ ಚಿತ್ರಗಳ ಪ್ರದರ್ಶನ*
ಇತ್ತೀಚಿನ ಸುದ್ದಿಗಳು

*ವಿರಾಜಪೇಟೆಯಲ್ಲಿ ಶಿವ ಜಯಂತಿ ಮಹೋತ್ಸವ : ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನ ಮತ್ತು ಆಧ್ಯಾತ್ಮಿಕ ಚಿತ್ರಗಳ ಪ್ರದರ್ಶನ*

February 27, 20242 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ವಿರಾಜಪೇಟೆ ಫೆ.27 NEWS DESK :  ನಮ್ಮನ್ನು ನಾವು ಪರಿವರ್ತನೆ ಮಾಡಿಕೊಂಡು ನಮ್ಮೊಳಗೆ ಬೆಳಕು ತರುವಂತದ್ದೇ ಧರ್ಮ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಅಭಿಪ್ರಾಯಪಟ್ಟರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವಿರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಜ್ಞಾನ ಗಂಗಾ ಭವನದ  ವತಿಯಿಂದ 88ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವದ ಪ್ರಯುಕ್ತ ವಿರಾಜಪೇಟೆ ನಗರದ ತಾಲೂಕು ಮೈದಾನದಲ್ಲಿ ಭಾರತದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನ ಮತ್ತು ಆಧ್ಯಾತ್ಮಿಕ ಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಅಂತರಂಗದಲ್ಲಿರುವ ಅಜ್ಞಾನ ತೊಲಗಿಸಿ ಜ್ಞಾನದ ಚಕ್ಷು ಬೀರಬೇಕು. ಜ್ಞಾನದ ಚಕ್ಷು ಇಲ್ಲದೆ ಸಿರಿಸಂಪತ್ತು, ಸಾಮ್ರಾಜ್ಯ, ತಂದಿಟ್ಟರೂ ಅದನ್ನು ಅನುಭವಿಸಲು ಹೊರಟಾಗ ನಮಗೆ ಶೂನ್ಯವೇ ಲಭಿಸುತ್ತದೆ. ಇಂದು ಎಲ್ಲ ಕಡೆ ಹಿಂಸೆ, ಕ್ರೋಧ, ಆಕ್ರೋಶ, ಅಸೂಯೆಗಳಲ್ಲಿ ತೊಡಗಿಸಿಕೊಂಡು ಜೀವನ ಎನೂ ಎಂಬುವುದನ್ನು ಮರೆತಿದ್ದಾರೆ. ತಾನು ಬದುಕುವುದರ ಜೊತೆಗೆ ಎಲ್ಲರನ್ನೂ ಪ್ರೀತಿಸುವಂತಾಗಬೇಕು. ದ್ವೇಷ ತೊಡೆದು ಹಾಕಬೇಕು. ಜಗತ್ತು ನನ್ನದು ಅಂತ ಪರಿಭಾವಿಸುವವನು ಜಗದ್ಗುರು ಆಗುತ್ತಾನೆ ಎಂದರು.

ಬಾಹ್ಯ ಅನ್ವೇಷಣೆಯಿಂದ ಪರಿವರ್ತನೆ ಸಾಧ್ಯವಿಲ್ಲ. ನಮ್ಮೊಳಗೆ ಇರುವ ಅರಿಷಡ್ವರ್ಗಗಳನ್ನು ನಾಶ ಮಾಡಿ ಎತ್ತರಕ್ಕೆ ಏರಿದರೆ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ನಾವು ಓದುತ್ತೇವೆ ಆದರೆ ಪಾಲಿಸುವುದಿಲ್ಲ. ನಾವು ಅನುಭವಿಸುವುದಕ್ಕಿಂತ ಅನುಸಂಧಾನ ಮಾಡಿಕೊಂಡು ನಮ್ಮ ಮೂಲ ಉದ್ದೇಶ ಓಂ ಶಾಂತಿ ಆಗಬೇಕು, ಮಾತು ಜ್ಯೋತಿರ್ಲಿಂಗವಾಗಬೇಕು ಎಂದು ಹಿತವಚನ ನೀಡಿದರು.

ಸೇವಾದಾರಿ ಮೈಸೂರಿನ ಪ್ರಾಣೇಶ್ ಅವರು ಮಾತನಾಡಿ ನಮ್ಮೊಳಗಿನ ಪರಿವರ್ತನೆ ಪ್ರಸ್ತುತ ಸಮಾಜದಲ್ಲಿ ಬಹಳ ಅವಶ್ಯಕವಾಗಿದೆ. ಭಗವಂತನ ಧ್ಯಾನದಿಂದ ಜ್ಞಾನ ಲಭಿಸುತ್ತದೆ. ನಮ್ಮೊಳಗಿನ ಅಂತಛಕ್ಷು ಜಾಗೃತವಾಗುತ್ತದೆ ಎಂದರು.

ಹಾಕಿ ಕೋಚ್, ನಿವೃತ್ತ ಸೈನಿಕ ಪ್ರಿನ್ಸ್ ಗಣಪತಿ ಮಾತನಾಡಿ, ನಮ್ಮ ಜೀವನದಲ್ಲಿ ಕಲಿಯುವಂತದ್ದು ಬಹಳಷ್ಟಿದೆ. ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಪರ್ಕಕ್ಕೆ ಬಂದ ನಂತರ ತಮ್ಮ ಜೀವನದ ಬದಲಾವಣೆಯ ಪರ್ವ ಹೇಗೆ ಪ್ರಾರಂಭವಾಯಿತು ಹಾಗೂ ಅದರಿಂದ ತಮಗಾದ ಅನುಕೂಲತೆ ಬಗ್ಗೆ ತಿಳಿಸಿ ಪ್ರತಿಯೊಬ್ಬರೂ ಜೀವನದಲ್ಲಿ ಒಳ್ಳೆಯದನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.

ಮಡಿಕೇರಿ ಶಾಖೆಯ ಧನಲಕ್ಷ್ಮಿ ಮಾತನಾಡಿ, ಜ್ಯೋರ್ತಿಲಿಂಗದ ಪುಣ್ಯದರ್ಶನ ಮಾಡುವುದರ ಮೂಲಕ ಅಂತರಂಗದ ಆವಿಷ್ಕಾರ ಮಾಡಿ ಅಜ್ಞಾನದ ಕತ್ತಲು ತೊಲಗಿಸಿ ಜ್ಞಾನದ ಬೆಳಕು ಹೆಚ್ಚಾಗಬೇಕು. ಸಂಕಷ್ಟಗಳನ್ನು ಮಂಜಿನಂತೆ ಕರಗಿಸುವ ಶಕ್ತಿ ಆದ್ಯಾತ್ಮಕ್ಕೆ ಇದೆ ಎಂದರು.

ಜ್ಞಾನ ಗಂಗಾ ಭವನದ ಮುಖ್ಯಸ್ಥರಾದ ಕೋಮಲ ಮಾತನಾಡಿ, ಆರು ದಿನಗಳ ಕಾಲ ಪ್ರವಚನ, ಜೀವನದಲ್ಲಿ ಸುಖ ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯ ದೊರಕಲೆಂದು ಜ್ಯೋತಿರ್ಲಿಂಗಗಳ ಪುಣ್ಯ ದರ್ಶನಕ್ಕಾಗಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಮಹಿಳೆಯರಿಗೆ, ಮಕ್ಕಳಿಗೆ, ಸಾರ್ವಜನಿಕರಿಗೆ ಪ್ರತ್ಯೆಕ ವ್ಯವಸ್ಥೆ ಮಾಡಲಾಗಿದೆ. ಮುಂದೆ ಬಹಳಷ್ಟು ಪರಿಸ್ಥಿತಿಗಳು ಬರುತ್ತದೆ. ಅದಕ್ಕಾಗಿ ನಮ್ಮ ಮನಸ್ಸನ್ನು ಸಶಕ್ತಗೊಳಿಸಿಕೊಳ್ಳಬೇಕಾಗಿದೆ ಎಂದರು.

ಮೈಸೂರು ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕ ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಮನಸ್ಸನ್ನು ಬಲಶಾಲಿ ಮಾಡಿಕೊಳ್ಳಲು ರಾಜಯೋಗ (ಮೆಡಿಟೇಶನ್) ಅಭ್ಯಾಸ ಮಾಡಬೇಕು. ಇದರಲ್ಲಿ ಸ್ವಯಂ ನಾನು ಯಾರು ಎಂಬುದು ಹಾಗೂ ಪರಮಾತ್ಮನ ಸತ್ಯ ಪರಿಚಯದ ಅವಶ್ಯಕತೆ ಇದೆ. ಸ್ವಯಂನ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಸಾಧ್ಯ. ಪ್ರಪಂಚವನ್ನು ನಾವು ಬದಲಿಸುತ್ತೇವೆ ಎಂದು ಹೇಳುತ್ತೇವೆ, ಆದರೆ ಅದು ಸಾಧ್ಯವಿಲ್ಲ.

ಶಾರೀರಿಕ ವೀರತ್ವ ಎಲ್ಲರಿಗೂ ಇರುತ್ತದೆ. ಆದರೆ ಮಾನಸಿಕ ವೀರತ್ವ ಎಲ್ಲರಿಗೂ ಬೇಕು. ಸ್ಥಿತಿಯನ್ನು ಸಮತೋಲನ ಮಾಡಿಕೊಂಡು ಸ್ಥಿರತೆ ಕಾಪಾಡಿಕೊಳ್ಳಬೇಕು. ಮಾನವ ಜೀವನವನ್ನು ದಾನವ ಜೀವನವನ್ನಾಗಿ ಮಾಡಿಕೊಳ್ಳಬಾರದು. ಅರಿಷಡ್ವರ್ಗಗಳೇ ನಮ್ಮ ಶತ್ರು. ಜೀವನದಲ್ಲಿ, ಪ್ರವೃತ್ತಿಯಲ್ಲಿ ಯೋಗಿಗಳಾಗಬೇಕು, ತ್ಯಾಗಮಯ ಜೀವನದಿಂದ ಮನೆಗೂ ಸಮಾಜಕ್ಕೂ ಆದರ್ಶರಾಗಿರಬೇಕು, ಮನಸ್ಸಿನಲ್ಲಿ ಭಗವಂತನ ಸ್ಮರಣೆ ಮಾಡಿ ಎಂದು ಸುದೀರ್ಘವಾಗಿ ಮಾತನಾಡಿದರು.

ಇದೇ ಸಂದರ್ಭ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಿತು. ಬಳಿಕ ನೆರೆದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಮಾರ್ಚ್ 1ರವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಜ್ಯೋತಿರ್ಲಿಂಗಗಳ ದರ್ಶನ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭ ವಿದ್ಯಾರಣ್ಯಪುರಂ ಶಾಖೆಯ ಸಂಚಾಲಕಿ ಯತ್ನ, ವಿವಿಧ ಸೇವಾ ಕೇಂದ್ರದ ಸದಸ್ಯರುಗಳು, ಸೇರಿದಂತೆ ಇತರರು ಹಾಜರಿದ್ದರು.

Share. Facebook Twitter Pinterest LinkedIn Tumblr Email WhatsApp
Previous Article*ಹೊದ್ದೂರು ಗ್ರಾ.ಪಂ ಕಚೇರಿ ಹಾಗೂ ಗ್ರಂಥಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ*
Next Article *ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿ : ಪುಷ್ಪ ನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ*

Website design development company services in Mangalore

Forex Trading Teacher in India

Related Posts

*ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*

February 13, 2026

*16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*

February 13, 2026

*ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*

February 13, 2026

*16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*

February 13, 2026

ಮಡಿಕೇರಿ NEWS DESK ಫೆ.13 :  ಬ್ರೈನೋಬ್ರೈನ್  ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ನಡೆದ “16ನೇ ಅಂತರಾಷ್ಟ್ರೀಯ…

*ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*

February 13, 2026

*ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*

February 13, 2026

*ಸಂಭ್ರಮದಿಂದ ಜರುಗಿದ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ. ಮೈಸೂರು ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ರವರ ನೇತೃತ್ವದಲ್ಲಿ ಜರುಗಿದ ದಿವ್ಯ ಬಲಿಪೂಜೆ*

February 13, 2026

*ಫೆ.15 ರಂದು ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ*

February 13, 2026

*ಬೆಂಗಳೂರಿನ ಪ್ರತಿಷ್ಠಿತ ಕೊಡಗು ಗೌಡ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ*

February 13, 2026

*ನಂದಿಬೆಟ್ಟದ ಗೇಟ್ ಬಂದ್! ಫೆಬ್ರವರಿ 14 ರಂದು ಪ್ರೇಮಿಗಳ ಪ್ರವೇಶಕ್ಕೆ ನಿರ್ಬಂಧ*

February 13, 2026

*ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ: ಗ್ಯಾರಂಟಿ ಯೋಜನೆಗಳ ಕಥೆಯೇನು? ಸಂಪುಟ ಸಭೆಯ ಈ 5 ಪ್ರಮುಖ ನಿರ್ಧಾರಗಳನ್ನು ಮಿಸ್ ಮಾಡ್ಬೇಡಿ!*

February 13, 2026

*ಸಂತೋಷವಾಗಿ ಹೊರಟವರು ಮಸಣ ಸೇರಿದರು! ಪೋಷಕರ ಆಸೆಗಳನ್ನು ಮಣ್ಣು ಮಾಡಿದ ಆ ಒಂದು ಕ್ಷಣದ ಅಚಾತುರ್ಯವೇನು?*

February 13, 2026

*ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ ಚೇಂಜ್ ಮೇಳ’*

February 13, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.