ಮಡಿಕೇರಿ ಮಾ.1 NEWS DESK : ಮಡಿಕೇರಿ ನಗರ ಬಿಜೆಪಿಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾಗಿ ಮನು ರೈ, ವಿಘ್ನೇಶ್ ಸಿ.ಯು, ಉಪಾಧ್ಯಕ್ಷರುಗಳಾಗಿ ಸುಜು ಅಚ್ಚಯ್ಯ, ಸಂದೀಪ್, ಅನುರಾಗ ಹಾಗೂ ಕಿರಣ್ ಕುಮಾರ್ ಆಯ್ಕೆಯಾಗಿದ್ದಾರೆ ಎಂದು ಯುವ ಮೋರ್ಚಾದ ನಗರಾಧ್ಯಕ್ಷ ಪಾಂಡಿರ ಪೂಣಚ್ಚ ತಿಳಿಸಿದ್ದಾರೆ.
ಬಿಜೆಪಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಹಾಗೂ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ ಅವರುಗಳ ಅನುಮೋದನೆಯೊಂದಿಗೆ ಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರÀನ್ನು ನೇಮಕ ಮಾಡಲಾಗಿದೆ. ನಗರದಲ್ಲಿ ಯುವ ಮೋರ್ಚಾವನ್ನು ಮತ್ತಷ್ಟು ಬಲಗೊಳಿಸಲು ಪಕ್ಷ ಸಂಘಟನೆಯನ್ನು ಚುರುಕುಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.








