ಮಡಿಕೇರಿ ಮಾ.3 NEWS DESK : ಪಲ್ಸ್ ಪೊಲಿಯೋ ಅಭಿಯಾನದ ಅಂಗವಾಗಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 5 ವಷ೯ದೊಳಗಿನ ಪುಟಾಣಿಗಳಿಗೆ ಪೋಲಿಯೋ ಹನಿ ಹಾಕಲಾಯಿತು. ಮಡಿಕೇರಿ ನಗರದ ಅಶೋಕಪುರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾಯ೯ಕ್ರಮದಲ್ಲಿ 5 ವಷ೯ದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಯಿತು. ಈ ಸಂದಭ೯ ಮಾತನಾಡಿದ ರೋಟರಿ ವಲಯ 6 ರ ಸಹಾಯಕ ಗವನ೯ರ್ ದೇವಣಿರ ತಿಲಕ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಪೋಲಿಯೋ ನಿವಾರಣೆಗಾಗಿ ರೋಟರಿ ಸಂಸ್ಥೆಯು ಬೃಹತ್ ಆಂದೋಲನ ಕೈಗೊಂಡಿದೆ. ಇದರ ಪರಿಣಾಮವಾಗಿಯೇ ಇಂದು ಬಹುತೇಕ ದೇಶಗಳಲ್ಲಿ ಪೊಲಿಯೋ ಕಣ್ಮರೆಯಾಗಿದೆ ಎಂದು ತಿಳಿಸಿದರು. ರೋಟರಿ ಮಿಸ್ಟಿ ಹಿಲ್ಸ್ ನ ಪಲ್ಸ್ ಪೊಲಿಯೋ ಯೋಜನೆಯ ನಿದೇ೯ಶಕ ಡಾ.ಚೇತನ್ ಶೆಟ್ಟಿ ಮಾತನಾಡಿ, ಪೊಲಿಯೋ ನಿರೋಧಕ ಲಸಿಕೆಯಲ್ಲಿ ಬಹಳಷ್ಟು ಆರೋಗ್ಯಕಾರಿ ಅಂಶಗಳಿದೆ. ಪೋಲಿಯೋ ಹನಿ ಹಾಕುವ ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯು ಪ್ರಬಲವಾಗಿ ರೂಪುಗೊಳ್ಳುತ್ತದೆ. ಹೀಗಾಗಿ 5 ವಷ೯ದೊಳಗಿನ ಪ್ರತೀ ಮಗುವೂ ಪೊಲಿಯೋ ಹನಿ ಹಾಕಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್.ಟಿ. ಮಾತನಾಡಿ, ಪಾಕಿಸ್ತಾನ್, ಅಪ್ಘಾನಿಸ್ತಾನ್, ಆಫ್ರಿಕಾ ದೇಶಗಳಲ್ಲಿನ ಕೆಲವು ಪ್ರಕರಣ ಹೊರತುಪಡಿಸಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಕೆಲವು ವಷ೯ಗಳಿಂದ ಪೊಲಿಯೋ ಪ್ರಕರಣಗಳು ವರದಿಯಾಗಿಲ್ಲ. ಈಗಾಗಲೇ ಭಾರತ ಪೊಲಿಯೋ ಮುಕ್ತ ದೇಶವಾಗಿದೆ. ಪೊಲಿಯೋ ನಿವಾರಣೆಯಲ್ಲಿ ರೋಟರಿ ಸಂಸ್ಥೆಯು ಜಾಗತಿಕ ಮಟ್ಟದಲ್ಲಿಯೇ ಪ್ರಮುಖ ಪಾತ್ರ ವಹಿಸಿದೆ ಎಂದು ಮಾಹಿತಿ ನೀಡಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾಯ೯ದಶಿ೯ ರತ್ನಾಕರ್ ರೈ, ನಿದೇ೯ಶಕರಾದ ಅಂಬೆಕಲ್ ವಿನೋದ್, ಪ್ರಸಾದ್ ಗೌಡ, ಜಗದೀಶ್ ಪ್ರಶಾಂತ್, ಪೊನ್ನಚ್ಚನ ಮಧುಸೂದನ್ , ಅಂಗನವಾಡಿ ಕೇಂದ್ರದ ಶಿಕ್ಷಕಿ ಮೀರಾ ಎಸ್. ಅರೆವೈದ್ಯಕೀಯ ವಿದ್ಯಾಥಿ೯ನಿಯರಾದ ಶೖತಿ, ಶಿಪಾನ್ ಹಾಜರಿದ್ದರು.
Breaking News
- *ಭಾಗಮಂಡಲ : ಎಲ್ಲಾ ಜಾತಿ, ಧರ್ಮ, ಭಾಷೆಗಳಿರುವ ನಾಡಿನಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಯಾವುದೇ ಕಾರಣಕ್ಕೂ ಧ್ವೇಷ ಮಾಡಬಾರದು : ಸಿಎಂ*
- *ರೂ.1.50 ಕೋಟಿ ಅನುದಾನ ಬಿಡುಗಡೆಗೆ ಸಿಎಂ ಗೆ ಮನವಿ ಸಲ್ಲಿಸಿದ ಮುದ್ದಂಡ ಹಾಕಿ ಉತ್ಸವ ಸಮಿತಿ*
- *ಅರ್ಚಕರ ಮೇಲೆ ಹಲ್ಲೆ : ಹೋರಾಟದ ಎಚ್ಚರಿಕೆ ನೀಡಿದ ವಿಶ್ವ ಹಿಂದು ಪರಿಷತ್ ಮಠ-ಮಂದಿರ್ ಘಟಕ*
- *ಫೆ.7 ರ ಪಾದಯಾತ್ರೆಗೆ ಸಿಎನ್ಸಿ ಬೆಂಬಲ*
- *ಕೊಡಗು : ಕಾರ್ಮಿಕರ ಸಾಮಾಜಿಕ ಭದ್ರತಾ ಕುರಿತು ಜನಜಾಗೃತಿ : ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ*
- *ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್ಸೈಟ್ ಬಿಡುಗಡೆ*
- *ಕೊಡಗಿಗೆ ಸಚಿವ ಸ್ಥಾನ ನೀಡಲು ಒತ್ತಾಯ*
- *ಮರಗೋಡಿನಲ್ಲಿ ಗೌಡ ಕುಟುಂಬಗಳ ಟೆನ್ನಿಸ್ ಬಾಲ್ ಕ್ರಿಕೆಟ್*
- *ತಲಕಾವೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ*
- *ವನ್ಯ ಜೀವಿ -ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ : ನಿವೇಶನ ಜಮೀನು ಇಲ್ಲದಿರುವವರಿಗೆ ಸರ್ಕಾರಿ ಭೂಮಿ : ಭಾಗಮಂಡಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ*