ಮಡಿಕೇರಿ ಮಾ.3 NEWS DESK : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಟ್ರಾನ್ಸ್ ಫಾರ್ಮರಿಗೆ ಡಿಕ್ಕಿಯಾಗಿ ಮಗುಚಿಕೊಂಡ ಘಟನೆ ಪೊನ್ನಂಪೇಟೆಯ ಕಾನೂರಿಗೆ ತೆರಳುವ ಮುಗುಟಗೇರಿ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಅದೇ ರಸ್ತೆಯಲ್ಲಿ ತೆರಳುತ್ತಿದ್ದವರೊಬ್ಬರು ಚೆಸ್ಕಾಂ ಗೆ ಕರೆ ಮಾಡಿ ವಿದ್ಯುತ್ ಸ್ಥಗಿತಗೊಳಿಸಿ ಅವಘಡಕ್ಕೀಡಾದ ಕಾರಿನ ಚಾಲಕನನ್ನು ರಕ್ಷಿಸಿದರು. ಕಾರು ಮತ್ತು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ.










