ಸುಂಟಿಕೊಪ್ಪ,ಮಾ.16 NEWS DESK : ವಿವಿಧ ಇಲಾಖೆಗಳ ಅನುದಾನದಡಿಯಲ್ಲಿ ಮಂಜೂರಾಗಿರುವ ಒಟ್ಟಾರೆ ರೂ.7ಕೋಟಿ ಮೊತ್ತದ ಕಾಮಗಾರಿಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
ಸುಂಟಿಕೊಪ್ಪ ನಾಡಕಚೇರಿ ಮುಂಭಾಗದಲ್ಲಿ ನೂತನವಾಗಿ ರೂ 5 ಕೋಟಿ ವೆಚ್ಚದಲ್ಲಿ 3 ಹಂತಗಳಲ್ಲಿ ಅನುಷ್ಠಾನಗೊಳ್ಳಲಿರುವ ಜಲಜೀವನ್ ಮಿಷನ್ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಅವರು ವಿಶೇಷವಾಗಿ ಸುಂಟಿಕೊಪ್ಪಕ್ಕೆ ಹರದೂರು ಸಮೀಪದ ಹಾರ್‍ಬೈಲ್ ಹೊಳೆಯಿಂದ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆ ಒಳಗೊಂಡಿದೆ. ಯೋಜನೆ ಶಾಶ್ವತವಾಗಿ ಮತ್ತು ಯಶಸ್ವಿಯಾಗಬೇಕಾದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಪೈಪ್ ಲೈನ್ ಅಳವಡಿಕೆ ಸೇರಿದಂತೆ ಕೆಲವು ತಾಂತ್ರಿಕ ಅಡಚಣೆಗಳನ್ನು ಯಶಸ್ವಿಯಾಗಿ ನಿಭಾಯಿಸಬೇಕೆಂದು ಹೇಳಿದ ಶಾಸಕರು ಕುಡಿಯುವ ನೀರಿನ ಯೋಜನೆಯಲ್ಲಿ ಕಳಪೆ ಕಾಮಗಾರಿ ನುಸುಳದಂತೆ ಎಚ್ಚರವಹಿಸಿಬೇಕೆಂದು ಕರೆ ನೀಡಿದರು.
ನಮ್ಮ ಸರಕಾರ ಎಲ್ಲಾ ಹಂತಗಳಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಾಗಿದ್ದು, 50-54 ಲೆಕ್ಕ ಶಿರ್ಷೀಕೆಯಡಿಯಲ್ಲಿ ರಸ್ತೆಗಳ ಅಭಿವೃದ್ಧಿ ಕೇಂದ್ರಿಯ ವಿಪತ್ತು ನಿರ್ವಹಣ ನಿಧಿಯಾಡಿಯಲ್ಲಿ ಕಾಮಗಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಯಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು, ಒಟ್ಟಾರೆಯಾಗಿ ಸರಿ ಸುಮಾರು 7 ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಲಾಗಿದೆ ಎಂದು ಶಾಸಕ ಮಂತರ್‍ಗೌಡ ಹೇಳಿದರು.
ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ ರಸ್ತೆಗಳ ಅಭಿವೃದ್ಧಿಗಳಿಗೆ ರೂ 1 ಕೋಟಿಗಿಂತಲ್ಲೂ ಹೆಚ್ಚು ಅನುದಾನ ನೀಡಿರುವುದು ಐತಿಹಾಸಿಕ ಎಂದು ಅವರು ಬಣ್ಣಿಸಿದರು ಜೋತೆಗೆ ಶಿಕ್ಷಣ, ಆರೋಗ್ಯ ಹೀಗೆ ಹಲವು ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಿ ಅನುದಾನ ತರುವ ಮೂಲಕ ಅಭಿವೃದ್ಧಿ ಎಂದರೆ ಮಂತರ್ ಎನ್ನುವ ರೀತಿಯಲ್ಲಿ ಶಾಸಕರು ಹೆಚ್ಚಿನ ಅನುದಾನಗಳನ್ನು ತಂದು ವಿನಿಯೋಗಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ವಿಶ್ಲೇಷಿದರು.
ಈ ಸಂದರ್ಭ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ವಿರೇಂದ್ರಕುಮಾರ್, ಇಂಜಿನೀಯರ್ ಫಯಾಜ್, ಮಾಜಿ ಜಿ.ಪಂ.ಸದಸ್ಯ ಪಿ.ಎಂ.ಲತೀಫ್, ಸದಸ್ಯರುಗಳಾದ ಸೋಮನಾಥ್, ರಫೀಕ್ ಖಾನ್, ಮಾಜಿ ಸದಸ್ಯರುಗಳಾದ ಶಾಜಿರ್, ರಜಾಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್,ಸುಂಟಿಕೊಪ್ಪ ಯೂತ್ ಕಾಂಗ್ರೆಸ್ ಅಧ್ಯಕ್ಷ ಅನೂಪ್ ಸೇರಿದಂತೆ ಗ್ರಾಮಸ್ಥರು ಇದ್ದರು.









