ನಾಪೋಕ್ಲು ಮಾ.22 NEWS DESK : ಬೆಟ್ಟಗೇರಿ ಭಗವತಿ ದೇವರ ವಾರ್ಷಿಕ ಉತ್ಸವವು ಮಾ.24 ಮತ್ತು 25 ರಂದು ನಡೆಯಲಿದೆ.
ಮಾ.24 ರಂದು ಪಟ್ಟಣಿ, ಹಗಲು ವಿಶೇಷ ಪೂಜಾ ಕೈಂಕರ್ಯಗಳು, ಮಧ್ಯಾಹ್ನ 1 ಗಂಟೆಗೆ ಕಟ್ರತಂಡ ಕುಟುಂಬದ ಭಂಡಾರದ ಮನೆಯಿಂದ ಬಂಡಾರ ಹೊರಡುವುದು, 2 ಗಂಟೆಗೆ ಶಾಸ್ತಾವು ತೆರೆ , ಸಂಜೆ 5 ಗಂಟೆಗೆ ಆಂಬಲದಲ್ಲಿ ಭಗವತಿ ಅಯ್ಯಪ್ಪ ತೆರೆ, 6 ಗಂಟೆಗೆ ದೇವರು ಬನಕ್ಕೆ ಹೋಗುವುದು ರಾತ್ರಿ, 7.30 ಗಂಟೆಗೆ ಚೌಂಡಿ ತೋತ ಹಾಗೂ 9 ಗಂಟೆಗೆ ಮೇಲೇರಿ ಕುಂಟೆಗೆ ಅಗ್ನಿಸ್ಪರ್ಶ ನಡೆಯಲಿದೆ.
ಮುಂಜಾನೆ ಮಂದಣ್ಣ ಮೂರ್ತಿ, ಅಂಜಿ ಕುಟ್ಟಿ ಮೂರ್ತಿ ಕರಿಬಾಳ ಹಾಗೂ ನುಚ್ಚಟ್ಟೆ ತೆರೆಗಳು ನಡೆಯಲಿವೆ.
ಮಾ.25 ರಂದು ಬೆಳಗ್ಗೆ 11 ಗಂಟೆಗೆ ವಿಷ್ಣುಮೂರ್ತಿಯ ಕೆಂಡಸೇವೆ ಹಾಗೂ ಗುಳಿಗ ರಾಜನ ಕೋಲ, ಮಧ್ಯಾಹ್ನ 12.30 ಗಂಟೆಯಿಂದ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪೌಡಂಡ ಡಾಲಿ ಭೀಮಯ್ಯ ಉಪಾಧ್ಯಕ್ಷ ಕಟ್ರತಂಡ ವಿಜಯ ಚಿಣ್ಣಪ್ಪ, ಕಾರ್ಯದರ್ಶಿ ಚಳಿಯಂಡ ಕಟ್ಟಿ, ಖಜಾಂಚಿ ಚಳಿಯಂಡ ಪುಟ್ಟ ಯತೀಶ್, ಗೌರವ ಸಲಹೆಗಾರರಾದ ನೆಯ್ಯಣಿರ ಹೇಮಕುಮಾರ್ , ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ದೇವಾಲಯದ ಜೀರ್ಣೋದ್ಧಾರ ::
ಬೆಟ್ಟಗೇರಿ ಭಗವತಿ ದೇವಾಲಯದ ಪೌಡೆಂಡ ಡಾಲಿ ಭೀಮಯ್ಯ ಅವರ ಅಧ್ಯಕ್ಷತೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ದೇಗುಲದ ಸಂಪೂರ್ಣ ಜೀರ್ಣೋದ್ಧಾರ ಮಾಡುವುದರೊಂದಿಗೆ ಜಿಲ್ಲಾಡಳಿತ, ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ದೇವಸ್ಥಾನಕ್ಕೆ ಕಾಂಕ್ರೀಟ್ ರಸ್ತೆ ಒಳ ಚರಂಡಿಗಳು ವಿದ್ಯುತ್ ಸಂಪರ್ಕ, ದೇವಸ್ಥಾನದಲ್ಲಿ ಒಳಾಂಗಣಬಾವಿ, ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.
ಬೆಟ್ಟಗೇರಿ ಭಗವತಿ ದೇವಸ್ಥಾನ ಪಟ್ಟಣದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಇದ್ದು ದುರ್ಗಮ ಹಾದಿಯಲ್ಲಿ ಬೆಟ್ಟದ ಮೇಲೆ ಸುಮಾರು 500 ವರ್ಷಗಳ ಇತಿಹಾಸವಿರುವ ದೇವಸ್ಥಾನವನ್ನು ತಲುಪುವುದು ಕಷ್ಟ ಸಾಧ್ಯವಾಗಿತ್ತು. ಆದರೆ ಸರ್ಕಾರದ ಅನುದಾನದಿಂದ ಅರ್ಧ ಕಿಲೋಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು ಇದೀಗ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಮುತುವರ್ಜಿಯಿಂದ ದೇವಸ್ಥಾನದ ಪಾಳು ಬಿದ್ದ ಬಾವಿಯನ್ನು ಶುಚಿಗೊಳಿಸಿ ಮೋಟಾರ್ ಅಳವಡಿಸಲಾಗಿದೆ.
ಹಾಗೆಯೇ ಇಲಾಖೆಯಿಂದ ಆರು ವಿದ್ಯುತ್ ಕಂಬಗಳು ಹಾಗೂ ಸಾಮಗ್ರಿಗಳನ್ನು ಇಲಾಖೆ ಬರಿಸಿದ್ದು ಉಳಿದ ವಿದ್ಯುತ್ ಕಂಬಗಳನ್ನು ದಾನಿಗಳ ಸಹಕಾರದಿಂದ ಹಾಕಿಸಿ ವಿದ್ಯುತ್ ಸಂಪರ್ಕ ನೀಡಲಾಗಿದೆ.ದೇವಸ್ಥಾನದ ಒಳಾಂಗಣಕ್ಕೆ 3.70, 800 ರೂ ವೆಚ್ಚದಲ್ಲಿ ಚಪ್ಪಡಿ ಕಲ್ಲು, ಹೊರಾಂಗಣಕ್ಕೆ 2,12, 980ರೂ ವೆಚ್ಚದಲ್ಲಿಇಂಟರ್ ಲಾಕ್,1,38, 000 ರೂ ವೆಚ್ಚದಲ್ಲಿ ನೂತನ ತೆರೆದ ಬಾವಿ,ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ನಡೆಸುವ ಮೂಲಕ ಭಗವತ್ ಭಕ್ತರನ್ನು ದೆಗುಲದೆಡೆಗೆ ಸೆಳೆಯುವಲ್ಲಿ ನೂತನ ಆಡಳಿತ ಮಂಡಳಿ ಯಶಸ್ವಿಯಾಗಿದೆ.
ಇನ್ನುಳಿದಂತೆ ಸಮುದಾಯ ಭವನ ಹೊರಾಂಗಣ ತಡೆಗೋಡೆ ಅರ್ಚಕರಿಗೆ ನಿವಾಸ ಬಾಕಿ ಇರುವ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಂಕ್ರೀಟ್ ಚರಂಡಿ ನಿರ್ಮಾಣ ದೇವಸ್ಥಾನಕ್ಕೆ ಉದ್ಯಾನವನ ವಿಷ್ಣುಮೂರ್ತಿ ದೇವರ ಗುಡಿಯ ಪುನರ್ ನಿರ್ಮಾಣ ಶೌಚಾಲಯ ನಿರ್ಮಾಣ ಉಗ್ರಾಣದ ನಿರ್ಮಾಣ ಸೇರಿದಂತೆ ಹಲವಾರು ಕೆಲಸ ಕಾರ್ಯಗಳು ಆಡಳಿತ ಮಂಡಳಿಯ ನಿರೀಕ್ಷೆಯಲ್ಲಿದೆ.
ವರದಿ : ದುಗ್ಗಳ ಸದಾನಂದ.