ಸೋಮವಾರಪೇಟೆ ಮಾ.22 NEWS DESK : ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಪ್ರಸಕ್ತ ಸಾಲಿನ ಜಾತ್ರೋತ್ಸವದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂಥರ್‍ಗೌಡ ಪಾಲ್ಗೊಂಡು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ರಾಜಗೋಪುರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಜಿ.ಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯನ್, ಪ್ರಮುಖರಾದ ಬಿ.ಬಿ.ಸತೀಶ್, ಚೇತನ್, ವಿನಿ, ಹೆಚ್.ಎ.ನಾಗರಾಜು, ಮೀನಾಕುಮಾರಿ, ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‍ಕುಮಾರ್, ದೇವಾಲಯ ಸಮಿತಿ ಪದಾಧಿಕಾರಿಗಳಾದ ಪ್ರಸನ್ನ ನಾಯರ್, ರಾಧಾಕೃಷ್ಣ, ಪಿ.ಕೆ.ರಾಜನ್, ಎನ್.ಜಿ.ಮೋಹನ್, ಕೆ.ಸಿ.ದಿನೇಶ್ ಮತ್ತು ನಿರ್ದೇಶಕರುಗಳು ಕ್ಷೇತ್ರದ ಭಕ್ತಾದಿಗಳು ಇದ್ದರು.









