ಮಡಿಕೇರಿ ಮಾ.23 NEWS DESK : ಕೊಡಗಿನ ಹಿರಿಯ ಸಾಹಿತಿ ಕುಶಾಲನಗರದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರಿಗೆ ವಿಶ್ವವಾಣಿ ಪತ್ರಿಕೆ ನೀಡುವ ಗ್ಲೋಬಲ್ ಅಚಿವ್ ಮೆಂಟ್ ಪ್ರಶಸ್ತಿ ದೊರಕಿದೆ.
ಕೊಡಗಿನ ಸಾಹಿತ್ಯ ಮತ್ತು ಪಾಕ ಕಲಾ ಕ್ಷೇತ್ರದಿಂದ ಈ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಇಂಡೋನೇಷ್ಯಾ ದೇಶದ ಬಾಲಿ ದ್ವೀಪದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಪ್ರಧಾನ ಮಾಡಲಾಗುತ್ತದೆ ಎಂದು ವಿಶ್ಲವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ತಿಳಿಸಿದ್ದಾರೆ.
ಕನಾ೯ಟಕದ ವಿವಿಧ ಕ್ಷೇತ್ರದ ಸಾಧಕರ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಫ್ಯಾನ್ಸಿ ಮುತ್ತಣ್ಣ ಕೊಡವ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಮನಾಹ೯ ಸಾಧನೆ ಮಾಡಿದ್ದು, 12 ಕೃತಿಗಳನ್ನು ರಚಿಸಿದ್ದಾರೆ. ಕವಿಗೋಷ್ಟಿ, ವಿಚಾರಗೋಷ್ಟಿಗಳಲ್ಲಿ ಪಾಲ್ಗೊಂಡು ಕೊಡವ, ಕನ್ನಡ ಭಾಷಾ ಸಾಹಿತ್ಯದ ಬಗ್ಗೆ ವಿಚಾರಮಂಡಿಸಿದ್ದಾರೆ. ಅಂತೆಯೇ ಪಾಕಕಲೆಯಲ್ಲಿಯೂ ಫ್ಯಾನ್ಸಿ ಹೆಸರುವಾಸಿಯಾಗಿದ್ದು ಅನೇಕ ಕಾಯ೯ಕ್ರಮಗಳಲ್ಲಿಯೂ ಪಾಲ್ಗೊಂಡು ಕೊಡಗಿನ ಪಾಕಕಲೆಯ ಬಗ್ಗೆಯೂ ಮಾಹಿತಿ ನೀಡಿರುವ ಹಿರಿಮೆ ಹೊಂದಿದ್ದಾರೆ.
ಫ್ಯಾನ್ಸಿ ಸಾಹಿತ್ಯ ಸಾಧನೆಗಾಗಿ ಈಗಾಗಲೇ ಅನೇಕ ಪ್ರಶಸ್ತಿಗಳು ಲಭಿಸಿದ್ದು, ಇದೀಗ ಗ್ಲೋಬಲ್ ಅಚೀವ್ ಮೆಂಟ್ ಪ್ರಶಸ್ತಿ ದೊರಕಿದೆ.











