ವಿರಾಜಪೇಟೆ ಮಾ.23 NEWS DESK : ವಿರಾಜಪೇಟೆಯ ಬಿಟ್ಟಂಗಾಲ ಗ್ರಾ.ಪಂ ವ್ಯಾಪ್ತಿಯ ಪೆಗ್ಗರಿಕಾಡುವಿನ ನವೋದಯ ಯುವಕ ಸಂಘದ ವತಿಯಿಂದ ಶಿವರಾತ್ರಿ ಆಚರಣೆ ಅಂಗವಾಗಿ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕ್ರೀಡಾಕೂಟದಲ್ಲಿ ಗುಡ್ಡಗಾಡು ಓಟ, ಓಟದ ಸ್ಫರ್ಧೇ, ಚಿಕ್ಕ ಮಕ್ಕಳಿಗೆ ವಿವಿಧ ಸ್ಫರ್ಧೇಗಳು, ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಮೂರು ವರ್ಷದ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲ ವಯೋಮಾನದವರು ಪಾಲ್ಗೊಂಡು ಕ್ರೀಡಾಕೂಟ ಯಶಸ್ವಿಗೊಳಿಸಿದರು.
ಬಳಿಕ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೆÇನ್ನಣ್ಣ ಈ ರೀತಿಯ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ದೊರೆತಂತಾಗುತ್ತದೆ. ಅಲ್ಲದೆ ಜಾತಿ ಭೇದ ಮರೆತು ನಾವು ಸೌಹಾರ್ದತೆಯಿಂದ ಎಲ್ಲಾ ಹಬ್ಬ ಹರಿದಿನಗಳನ್ನು ಆಚರಿಸಬೇಕೆಂದು ಯುವಕರಿಗೆ ಕಿವಿ ಮಾತನ್ನು ಹೇಳಿದರು.
ಬಿಟ್ಟಂಗಾಲದ ಎವರ್ ಗ್ರೀನ್ ಕೌಂಟಿಯ ಮಾಲೀಕರಾದ ಭಜನ್ ಬೋಪಣ್ಣ ಮಾತನಾಡಿ, ಯುವಕರು ದೇಶದ ಬೆನ್ನೆಲುಬು, ಪ್ರತಿಯೊಬ್ಬರೂ ಸಮಾಜಮುಖಿ ಕೆಲಸ ಮಾಡುವ ನಿಟ್ಟಿನಲ್ಲಿ ಸದಾ ಚಿಂತಿತರಾಗಬೇಕು ಎಂದು ಹೇಳಿದರು.
ಸಾಹಿತಿ ಬಡಕಡ ರಜಿತ ಕಾರ್ಯಪ್ಪ ಮಾತನಾಡಿ, ಭಾರತದ ಯುವ ಜನತೆ ಮತ್ತು ಸಂಸ್ಕøತಿ ಎಂಬ ವಿಷಯದ ಬಗ್ಗೆ ಮಾತನಾಡಿ ಇಂದಿನ ಯುವಜನತೆ ತಮ್ಮ ಆಚಾರ ವಿಚಾರ ಪದ್ದತಿಗಳನ್ನು ಮರೆತು ಪಾಶ್ಚಾತ್ಯ ಸಂಸ್ಕøತಿ ಕಡೆಗೆ ಮಾರುಹೋಗುತ್ತಿದ್ದಾರೆ. ಆಧುನಿಕ ಜಗದಲ್ಲಿ ಯುವಜನತೆ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಕರು ಭಾರತದ ಸಂಸ್ಕøತಿಗೆ ತಲೆಬಾಗಿ ನಡೆಯುವ ಸಂಕಲ್ಪ ಮಾಡಬೇಕು. ಪ್ರತಿಯೊಬ್ಬರೂ ಏಕಾಗ್ರತೆ, ಸಮಯಪಾಲನೆ, ಮಾಡಬೇಕು. ತಂದೆ ತಾಯಿಯನ್ನು ಗೌರವಿಸಬೇಕು, ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಮುನ್ನಡೆಯಬೇಕು. ನಿಸ್ವಾರ್ಥ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರಲ್ಲದೆ ಮಕ್ಕಳನ್ನು ನಾವು ನೆಲಮೂಲ ಸಂಸ್ಕøತಿ ಕಡೆಗೆ ಸಾಗಿಸಬೇಕು. ಆಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ನವೋದಯ ಯುವಕ ಸಂಘದ ಕಾರ್ಯದರ್ಶಿ ಕೆ.ಎಂ.ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಗ್ರಾಮದ ಸ್ವಚ್ಚತೆಯನ್ನು ಕಾಪಾಡುತ್ತಿರುವ ಗ್ರಾಮ ಪಂಚಾಯಿತಿಯ ಇಬ್ಬರು ಸ್ವಚ್ಚತಾ ಸಿಬ್ಬಂದಿಯನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ವಿತರಿಸಿದರು.
ವೇದಿಕೆಯಲ್ಲಿ ನವೋದಯ ಯುವಕ ಸಂಘದ ಅಧ್ಯಕ್ಷ ಬಿ.ಎಮ್. ದಿನೇಶ್, ಗ್ರಾ.ಪಂ ಸದಸ್ಯರಾದ ಪಿ.ಎನ್.ಶಾರದ, ನವೋದಯ ಯುವಕ ಸಂಘದ ಉಪಾಧ್ಯಕ್ಷ ಟಿ.ಪಿ.ಸುಬ್ಬಯ್ಯ ಉಪಸ್ಥಿತರಿದ್ದರು.
ಬಹುಮಾನ ವಿತರಣೆ ಕಾರ್ಯಕ್ರಮದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರ ಪ್ರದರ್ಶನ ನಡೆಯಿತು.
ವಿನೋದ್ ಪಿ.ಎನ್ ಮತ್ತು ಟಿ.ವಿ.ಅಜಿತ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಿ.ಎಸ್.ತೇಜಾ ಸ್ವಾಗತ ಭಾಷಣವನ್ನು ನೆರವೇರಿಸಿದರು. ಟಿ.ಪಿ.ಶ್ರೀಜಿತ್ ವಂದನಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.










