ಕಡಂಗ ಮಾ.23 NEWS DESK : ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ 20ನೇ ವರ್ಷದ ಮುಸ್ಲಿಂ ಕ್ರಿಕೆಟ್ ಮತ್ತು ಹಗ್ಗ ಜಗ್ಗಾಟ ಕ್ರೀಡಾಕೂಟವನ್ನು ಮೇ 10 ರಿಂದ 19 ರವರೆಗೆ ಮೂರ್ನಾಡು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಆದಂ ತಿಳಿಸಿದ್ದಾರೆ.
ಏಪ್ರಿಲ್ ತಿಂಗಳು ನಡೆಸಲು ತೀರ್ಮಾನಿಸಲಾಗಿದ್ದ ಕ್ರೀಡಾಕೂಟವು ಲೋಕಸಭಾ ಚುನಾವಣೆ ಇರುವುದರಿಂದ ದಿನಾಂಕವನ್ನು ಮುಂದೂಡಲಾಗಿ ಎಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಲು ಇಚ್ಚಿಸುವವರು ಏ.25ರ ಒಳಗೆ ಮೊ. ಸಂಖ್ಯೆ 9900900250, 9740481273 ನೊಂದಾವಣಿ ಮಾಡಿಕೊಳ್ಳಬಹುದಾಗಿದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.
ವರದಿ : ನೌಫಲ್ ಕಡಂಗ









