ನಾಪೋಕ್ಲು ಮಾ.24 NEWS DESK : ನಾಪೋಕ್ಲು ಸಮೀಪದ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವ ಸಂಪನ್ನಗೊಂಡಿತು. ಉತ್ಸವದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು. ದೇವಾಲಯದಲ್ಲಿ ತುಲಾಭಾರ ಸೇವೆ ನಂತರ ಭಕ್ತರು ವಿವಿಧ ರೀತಿಯ ಹರಕೆ ಸಲ್ಲಿಸಿದರು. ಮಹಾಪೂಜೆ ಹಾಗೂ ಭಕ್ತರಿಗೆ ಪ್ರಸಾದ ವಿತರಣೆಯಾಯಿತು. ಎತ್ತುಪೋರಾಟ, ಅನ್ನಸಂತರ್ಪಣೆ ಮತ್ತು ದೇವರ ಪ್ರದರ್ಶನ ಬಲಿ ಜರುಗಿತು. ತಂತ್ರಿ ಸುರೇಶ್ ಶರ್ಮ, ಅರ್ಚಕ ರಮೇಶ್ ಶರ್ಮ, ಸುಧೀರ ಹಾಗೂ ಜಯಚಂದ್ರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಇಗ್ಗುತ್ತಪ್ಪ ದೇವರ ಆದಿ ಸ್ಥಳವಾದ ಮಲ್ಮ ಬೆಟ್ಟಕ್ಕೆ ಎತ್ತುಪೋರಾಟದೊಂದಿಗೆ ತೆರಳಿ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ, ತಕ್ಕ ಮುಖ್ಯಸ್ಥರಾದ ನಾಪನೆರವಂಡ ಪೊನ್ನಪ್ಪ, ಬಾಳೆಯಡ ರಾಜ ಕುಂಞಪ್ಪ, ಬದಂಚೆಟ್ಟೀರ ನಾಣಯ್ಯ, ಆಡಳಿತ ಮಡಳಿ ಅಧ್ಯಕ್ಷ ಮುಂಡಂಡ ನಾಣಯ್ಯ, ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಖಜಾಂಚಿ ಮನವಟ್ಟಿರ ಪಾಪು ಚಂಗಪ್ಪ, ಮಂಡಿರ ನಂದ, ಅಪ್ಪುಮಣಿಯಂಡ ಸನ್ನು ಸೋಮಣ್ಣ, ಬದಂಚೆಟ್ಟೀರ ದೇವಯ್ಯ, ಬಾಳೆಯಡ ಶಿವಕುಮಾರ್, ಆಡಳಿತ ಮಡಳಿ ಸದಸ್ಯರು, ಗ್ರಾಮಸ್ಥರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. -(ವರದಿ : ದುಗ್ಗಳ ಸದಾನಂದ)










