ಮಡಿಕೇರಿ ಮಾ.24 NEWS DESK : ಫೆಡರೇಷನ್ ಆಫ್ ಕೊಡವ ಸಮಾಜದ ವಿಮೆನ್ಸ್ ವಿಂಗ್ ವತಿಯಿಂದ ಬಾಳುಗೋಡಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು. ವಿಮೆನ್ಸ್ ವಿಂಗ್ ಅಧ್ಯಕ್ಷೆ ಬಲ್ಲಣಮಾಡ ರೀಟಾ ದೇಚಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕರಾದ ಕುಪ್ಪ0ಡ ಛಾಯ ನಂಜಪ್ಪ, ಬಲ್ಲಚಂಡ ಲೂಸಿ ನಂಜಮ್ಮ ಹಾಗೂ ಕೋಡಿಮಣಿಯಂಡ ಮೌಲ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.










