ಮಡಿಕೇರಿ ಮಾ.25 NEWS DESK : ಕರಿಕೆ ತೋಟಂ ನ ಶ್ರೀ ಮುತ್ತಪ್ಪ ದೇವಾಯದಲ್ಲಿ ಮಾ.31 ರಂದು ಶ್ರೀ ಮುತ್ತಪ್ಪ ದೇವರ ವೆಳ್ಳಾಟ ನಡೆಯಲಿದೆ.
ಅಂದು ಮುಂಜಾನೆ 5 ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ 10 ಗಂಟೆ ಪಯಂಕುಟ್ಟಿ, 10.30ಕ್ಕೆ ದೇವರನ್ನು ಮಲೆ ಇಳಿಸುವುದು, 11 ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟ ಪ್ರಾರಂಭವಾಗಲಿದೆ.
ಮಧ್ಯಾಹ್ನ 1 ಗಂಟೆಗೆ ಅನ್ನದಾನ ನೆರವೇರಲಿದ್ದು, ಸಂಜೆ 4 ಗಂಟೆಗೆ ದೇವರನ್ನು ಮಲೆ ಏರಿಸಲಾಗುವುದು.
ಭಕ್ತಾಧಿಗಳು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ಮುತ್ತಪ್ಪ ದೇವಾಲಯದ ಪ್ರಮುಖರಾದ ಎನ್.ಕೆ.ಗಂಗಾಧರ ಮತ್ತು ಕುಟುಂಬಸ್ಥರು ಕೋರಿದ್ದಾರೆ.










