ಮಡಿಕೇರಿ ಮಾ.25 NEWS DESK : ಕುಂದಾ ಬೆಟ್ಟದ ತಪ್ಪಲಿನಲ್ಲಿ ಗುಮ್ಮಟೀರ ಕುಟುಂಬಸ್ಥರ ಜಾಗದಲ್ಲಿ ಪುರಾತನ ಕಾಲದಲ್ಲಿ ಪಾಂಡವರು ನಿರ್ಮಿಸಿದರು ಎನ್ನಲಾದ ತಲೆಬಲ್ಯ ಈಶ್ವರ ದೇವಾಲಯದ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ಕಲ್ಯಾಟಜ್ಜಪ್ಪ ಮಾರ್ಗದರ್ಶನದಂತೆ ಮೂರು ದಿನಗಳ ಕಾಲ ನೆರವೇರಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪ್ರಾರ್ಥನೆ ನೆರವೇರಿಸಿದರು.









