ಮಡಿಕೇರಿ ಮಾ.25 NEWS DESK : ಕರ್ನಾಟಕ ಪರಂಪರೆ ರ‍್ಯಾಲಿ ಪರಿಕಲ್ಪನೆಯೊಂದಿಗೆ ಜಿಲ್ಲೆಗೆ ಆಗಮಿಸಿರುವ ನೌಕಾದಳದ ಅಧಿಕಾರಿಗಳ ತಂಡ ನಗರದ ಬಾಲಭವನ ಹಾಗೂ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಿತು.
ನೌಕಾದಳದ ಅಧಿಕಾರಿ ರಿಯರ್ ಅಡ್ಮಿರಲ್ ರಾಮಕೃಷ್ಣನ್ ನೇತೃತ್ವದಲ್ಲಿ ಬಾಲಭವನಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಅಗ್ನಿಪಥ್ ಯೋಜನೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಲವು ಮಾಹಿತಿಗಳನ್ನು ನೀಡಿದರು. ಮಕ್ಕಳೊಂದಿಗೆ ಸಂವಾದ ನಡೆಸಿದ ತಂಡದ ಪ್ರಮುಖರು ಮಕ್ಕಳಿಗೆ ಅಗತ್ಯ ವಸ್ತುಗಳ ಜೊತೆ ಸಹಿ ವಿತರಿಸಿದರು.
ನಂತರ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಆಶ್ರಯಪಡೆದಿರುವವರನ್ನು ಭೇಟಿಯಾಗಿ ವಿವಿಧ ಅಗತ್ಯತೆಯ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು.
ಪ್ರಮುಖರೊಂದಿಗೆ ಸಮಾಲೋಚನೆ :: ನಿವೃತ್ತ ಸೇನಾಧಿಕಾರಿಗಳು ಹಾಗೂ ಇತರ ಪ್ರಮುಖರೊಂದಿಗೆ ನೌಕಾದಳ ತಂಡ ನಗರದ ಕ್ಯಾಪಿಟಲ್ ವಿಲೇಜ್‍ನಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.
ಅಲ್ಲದೇ ಅಧಿಕಾರಿಗಳಿಗೆ ಕೊಡಗಿನ ಕೊಡವ ಸಂಸ್ಕೃತಿಯಾದ ಉಮ್ಮತ್ತಾಟ್, ಕತ್ತಿಯಾಟ್, ಬೊಳಕಾಟ್ ನಂತಹ ಜನಪದ ಕಲೆಗಳನ್ನು ಪ್ರದರ್ಶಿಸಿ ವಿಶೇಷತೆ ಕುರಿತು ವಿವರಿಸಲಾಯಿತು ಎಂದು 30 ಮುಂದಿ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ ಕೊಡಗಿನವರಾದ ಲೆಫ್ಟಿನೆಂಟ್ ಕಮಾಂಡರ್ ಕುಂಚೆಟ್ಟಿರ ಸುಬ್ಬಯ್ಯ ತಿಳಿಸಿದ್ದಾರೆ.










