ಮಡಿಕೇರಿ ಮಾ.25 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕೊಡಗಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದರು.
ಈಚೂರು ಕುಂದ ಗ್ರಾಮದ ಶ್ರೀ ತಲೆಬಲೇಶ್ವರ ಬನ ದೇವಾಲಯಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಂತರ ಪೊನ್ನಂಪೇಟೆಯ ಶ್ರೀ ಮಹಾವಿಷ್ಣು ದೇವಾಲಯದ ಪುನರ್ ಪ್ರತಿಷ್ಠಾಪನೆ, ನಲ್ಲಗೋಟಿ ಭಾಗದ ಕೋಟೆಬೆಟ್ಟ ಎಸ್ಟೇಟ್ (ಕುಂದ) ಪಾಲಿಬೆಟ್ಟ ರಸ್ತೆಯ ಶ್ರೀ ಸುಬ್ರಮಣ್ಯ ಸ್ವಾಮಿಯ ವಾರ್ಷಿಕ ಮಹೋತ್ಸವ, ಅರವತ್ತೋಕ್ಲು ಕಡ್ಲಿಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.









