ಕುಶಾಲನಗರ ಮಾ.27 NEWS DESK : ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಎನ್ ಸಿ ಇ ಆರ್ ಟಿ )ಯಲ್ಲಿ 2019 ರಿಂದ 2023 ರ ಸಾಲಿನ ಬಿಎಸ್ಸಿ ಬಿಎಡ್ ಇಂಟಿಗ್ರೇಟೆಡ್ ( ಪಿಸಿಎಂ ) ಶಿಕ್ಷಣದಲ್ಲಿ ಮಾಡಿದ ಅಪೂರ್ವ ಸಾಧನೆಗಾಗಿ ಕೊಡಗಿನ ಬಾನಂಡ ಡಿ.ವಿದ್ಯಾಶ್ರೀ ಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಅಕಾಡೆಮಿಕ್ ಎಕ್ಸೆಲೆನ್ಸ್ ಅವಾರ್ಡ್ ಪ್ರಶಸ್ತಿ ಲಭಿಸಿದೆ.
ಮೂಲತಃ ಮಡಿಕೇರಿ ನಿವಾಸಿಯಾಗಿರುವ ಪ್ರಸ್ತುತ ಕುಶಾಲನಗರದ ಕೊಪ್ಪಾದಲ್ಲಿ ವಾಸವಿರುವ ಇವರು ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದರು. ನಂತರ ಮಡಿಕೇರಿ ಸಂತ ಜೋಸೆಫರ ಪಿಯು ಕಾಲೇಜಿನ ದ್ವಿತೀಯ ಪಿಯುಸಿಯಲ್ಲೂ ಗಣನೀಯ ಸಾಧನೆ ಮಾಡಿದ್ದಾರೆ.
ಹುಣಸೂರು ವನ್ಯಜೀವಿ ವಿಭಾಗದ ದೊಡ್ಡಹರವೆ ಭಾಗದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ದಲ್ಲಿರುವ ಬಾನಂಡ ದೇವಿಪ್ರಸಾದ್ ಹಾಗೂ ಪಿ.ಎಂ.ನೈನಾ ದಂಪತಿಗಳ ಪುತ್ರಿಯಾಗಿರುವ ವಿದ್ಯಾಶ್ರೀ ಇದೀಗ ಮೈಸೂರಿನಲ್ಲಿರುವ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಎಂಎಸ್ಸಿ ಎಂ.ಎಡ್ ಸ್ನಾತ ಕೋತ್ತರ ಪದವಿಗೆ ಸೇರ್ಪಡೆಯಾಗಿದ್ದಾರೆ.

