ಮಡಿಕೇರಿ ಮಾ.29 NEWS DESK : ಲೋಕಸಭಾ ಚುನಾವಣೆ ಹಿನ್ನೆಲೆ ಗಡಿ ಭಾಗಗಳಲ್ಲಿ ಕಾನೂನು ಸುವ್ಯವಸ್ಥೆಗಳನ್ನು ಕಾಪಾಡುವ ಸಲುವಾಗಿ ಅಂತರ ರಾಜ್ಯ ಮತ್ತು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ವಿರಾಜಪೇಟೆ ಮತ್ತು ಸೋಮವಾರಪೇಟೆಯಲ್ಲಿ ನಡೆಯಿತು.
ಚುನಾವಣಾ ಹಿನ್ನೆಲೆ ಕೊಡಗು, ಹಾಸನ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದ ಗಡಿಭಾಗದ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವುದು ಮತ್ತು ಅಕ್ರಮ ಚಟುವಟಿಕೆಗಳು, ನಕ್ಸಲ್ ಚಟುವಟಿಕೆಗಳು, ಸಾಮಾಜಿಕ ವಿರೋಧಿ ಚಟುವಟಿಕೆ, ಕೋಮಗಲಭೆ, ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ, ರೌಡಿ ಆಸಾಮಿಗಳ ಮೇಲೆ ನಿಗಾವಣೆ ಹಾಗೂ ಇನ್ನಿತರೆ ವಿಷಯಗಳ ಕುರಿತು ವಿಸ್ತೃತ ಚರ್ಚೆಗಳು ನಡೆದವು.
ಹಿರಿಯ ಅಧಿಕಾರಿಗಳ ಸೂಚನೆಯಂತೆ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ನಡೆದ ಸಭೆಯಲ್ಲಿ ನರೆಯ ಕೇರಳ ರಾಜ್ಯದ ಪೊಲೀಸ್ ಅಧಿಕಾರಿಗಳು, ಜಿಲ್ಲೆ ಮತ್ತು ಹೊರ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
ವಿರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ ಕೇರಳ ರಾಜ್ಯ ಇರಿಟ್ಟಿ ಎಎಸ್‍ಪಿ ಯೋಗೇಶ್ ಮಂಡಯ್ಯ, ಮನಂತವಾಡಿ ಡಿಎಸ್‍ಪಿ ಪಿ.ಬ್ರಿಜೇಶ್, ವಿರಾಜಪೇಟೆ ಉಪವಿಭಾಗದ ಡಿಎಸ್ಪಿ ಆರ್.ಮೋಹನ್ ಕುಮಾರ್, ನಾಗರಹೊಳೆ ಉಪವಿಭಾಗದ ಎಸಿಎಫ್ ಪಿ.ಅನುಷಾ, ತಿತಿಮತಿ ಎಸಿಎಫ್ ಕೆ.ಪಿ.ಗೋಪಾಲ್, ತಿರುನೆಲ್ಲಿ ಪಿ.ಐ ಲಾಲ್ ಸಿ ಬೇಬಿ, ಇರಿಟ್ಟಿ ಪಿಐ ಜಿಜೇಶ್ ಪಿ.ಕೆ., ಕುಟ್ಟ ವೃತ್ತದ ಸಿಪಿಐ ಸುನೀಲ್ ಕುಮಾರ್, ವಿರಾಜಪೇಟೆ ವೃತ್ತದ ಸಿಪಿಐ ಶಿವರುದ್ರ, ವಿರಾಜಪೇಟೆ ಗ್ರಾಮಾಂತರ ಪಿಎಸ್‍ಐಗಳಾದ ಮಂಜುನಾಥ, ತಮ್ಮಯ್ಯ, ವಿರಾಜಪೇಟೆ ನಗರ ಪೊಲೀಸ್ ಠಾಣೆ ಪಿಎಸ್‍ಐಗಳಾದ ಎಸ್.ರವೀಂದ್ರ, ಹೆಚ್.ಟಿ.ಕೃಷ್ಣಕುಮಾರ್, ಕುಟ್ಟ ಪಿಎಸ್‍ಐ ಗಳಾದ ಸಿ.ಇರ್ಷಾದ್, ಶಕುಂತಲಾ, ನಾಪೋಕ್ಲು ಪಿ.ಎಸ್.ಐ ಮಂಜುನಾಥ್, ಗೋಣಿಕೊಪ್ಪ ಪಿಎಸ್‍ಐ ರೂಪಾದೇವಿ ಬಿರಾದಾರ್, ಪೊನ್ನಂಪೇಟೆ ಪಿಎಸ್‍ಐ ಬಿ.ಶ್ರೀಧರ್ ಹಾಜರಿದ್ದರು.
ಸೋಮವಾರಪೇಟೆಯಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್, ಅಧಿಕಾರಿಗಳಾದ ಆರ್.ವಿ. ಗಂಗಾಧರಪ್ಪ, ಅಶೋಕ್, ಪ್ರದೀಪ್ ಕುಮಾರ್, ಪ್ರಕಾಶ್, ಕೆ.ರಾಜೇಶ್, ಕೆ.ಎಂ.ವಸಂತ, ಜಿ.ಕೆ.ರಾಗವೇಂದ್ರ, ವೀಣಾ, ಗೋವಿಂದರಾಜ್, ಎಂ.ಸಿ.ಶ್ರೀಧರ್, ಪಿ.ಮೋಹನರಾಜು, ರವಿಶಂಕರ್, ಗಿರೀಶ್, ಸರಸ್ವತಿ, ಜಿತೇಂದ್ರ, ಮಂಜುಳಾ ಪಾಲ್ಗೊಂಡಿದ್ದರು.