ಸೋಮವಾರಪೇಟೆ ಮಾ.29 NEWS DESK : ಸೋಮವಾರಪೇಟೆಯ ಜಯವೀರಮಾತೆ ಚರ್ಚ್ ವತಿಯಿಂದ GOOD FRIDAY ಪ್ರಯುಕ್ತ ಪಟ್ಟಣದಲ್ಲಿ ಶಾಂತಿ ಮೆರವಣಿಗೆ ಶುಕ್ರವಾರ ನಡೆಯಿತು. ಜೇಸಿ ವೇದಿಕೆಯಲ್ಲಿ ಚರ್ಚ್ನ ಸಹಾಯಕ ಧರ್ಮಗುರು ಜಾನ್ ಫರ್ನಾಂಡಿಸ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಜೇಸಿ ವೇದಿಕೆಯಲ್ಲಿ ಯೇಸು ಕ್ರಿಸ್ತನನ್ನು ಶಿಲುಬೆಗೇರಿಸುವ ರೂಪಕ ನೋಡುಗರನ್ನು ಅರ್ಕಷಿಸಿತು. ಏಸು ಕ್ರಿಸ್ತನನ್ನು ರೋಮನ್ ಸೈನಿಕರು ಥಳಿಸುವ ದೃಶ್ಯಗಳು ಮೆರವಣಿಗೆಯಲ್ಲಿ ಸಾಗಿತು. ಮೆರವಣಿಗೆಯಲ್ಲಿ ಪ್ರಮುಖರಾದ ಶೀಲಾ ಡಿಸೋಜ, ಮಾರ್ಷಲ್ ಲೋಬೋ, ಸುನಿಲ್, ಪ್ರಿನ್ಸ್, ಮರ್ವಿನ್, ಲಾರೆನ್ಸ್ ಮತ್ತಿತರರು ಇದ್ದರು.








