Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿರಾಜಪೇಟೆ : ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಕೊಡುಗೆ*
  • *ವಿರಾಜಪೇಟೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ : ವೀರಯೋಧರಿಗೆ ನಮನ*
  • *ಕರಾಟೆ ಪಂದ್ಯಾವಳಿ : 22 ವಿದ್ಯಾರ್ಥಿಗಳಿಗೆ ಪದಕಗಳ ಗರಿ : ಚೈತನ್ಯ ಅತ್ಯುತ್ತಮ ಸಾಧನೆ*
  • *ಅರೆಭಾಷೆ ಅಕಾಡೆಮಿಯಿಂದ ವಿಟ್ಲದಲ್ಲಿ ವಿಜೃಂಭಿಸಿದ ಆಟಿಲೊಂದು ದಿನ*
  • *ಕಾರ್ಗಿಲ್ ದಿನಾಚರಣೆ : 143 ಸಂಘ ಸಂಸ್ಥೆಗಳಿಂದ ಮಡಿಕೇರಿಯಲ್ಲಿ ಯೋಧರಿಗೆ ಗೌರವಾರ್ಪಣೆ*
  • *ಕೊಡಗು : ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಸಮಾಧಿ ನಿರ್ಮಾಣ : ಹಿಂದೂ ಸಂಘಟನೆಗಳಿದ ಬೃಹತ್ ಪ್ರತಿಭಟನೆ : ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ*
  • *ಇಗ್ಗುತ್ತಪ್ಪ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ*
  • *ಮನೆಯ ತಡೆಗೋಡೆ ಕುಸಿತ : ಸಂಪಿಗೆಕಟ್ಟೆಯಲ್ಲಿ ಘಟನೆ*
  • *ವಿರಾಜಪೇಟೆ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸೆಂಟ್ ಆನ್ಸ್ ಕಾಲೇಜಿನಲ್ಲಿ 2026-27 ನೇ ಶೈಕ್ಷಣಿಕ ಸಾಲಿನ ಎಂ.ಕಾಂ. ಸ್ನಾತಕೋತ್ತರ ಪದವಿ ತರಗತಿ ಪ್ರವೇಶಾತಿ ಆರಂಭ*
  • *ಮಾದರಿಯಾದ ಕೊಡಗು ವಿದ್ಯಾಲಯದ ಎನ್.ಸಿ.ಸಿ. ಕೆಡೆಟ್‌ ಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸುಂಟಿಕೊಪ್ಪ : ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಾ.ಮಂತರ್ ಗೌಡ ಅನುದಾನ ಘೋಷಣೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸುಂಟಿಕೊಪ್ಪ : ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಾ.ಮಂತರ್ ಗೌಡ ಅನುದಾನ ಘೋಷಣೆ*

ಜುಲೈ 7, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸುಂಟಿಕೊಪ್ಪ ಜು.8 NEWS DESK : ಸಹಕಾರ ಕ್ಷೇತ್ರವು ಪ್ರಜಾಪ್ರಭುತ್ವದ ಮಾದರಿಯಲ್ಲಿ ಪ್ರಶ್ನಿಸುವ ಗುಣಗಳನ್ನು ಪ್ರತಿಯೊಬ್ಬ ಸದಸ್ಯರು ಬೆಳೆಸಿಕೊಂಡಾಗ ಮಾತ್ರ ಸಹಕಾರ ಕ್ಷೇತ್ರವು ಬಲಿಷ್ಠವಾಗಿ ಬೆರೂರಲು ಸಾಧ್ಯವೆಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಅಭಿಪ್ರಾಯಪಟ್ಟರು. ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ, ರಂಗಸಮುದ್ರ ಸಹಕಾರ ಧವಸ ಭಂಡಾರ ಸಂಘ ಹಾಗೂ ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಭಿನಂದನಾ ಸಮಾರಂಭ ಹಾಗೂ ಮೂರು ಸಂಘಗಳ ಜಾಗದ ದಾಖಲೆ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಪ್ರಶ್ನೆ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ಸಹಕಾರಿ ಕ್ಷೇತ್ರದಲ್ಲಿ ಅತ್ಯಂತ ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು. ಗ್ರಾಮೀಣ ಭಾಗದ ಜನತೆ ಹೈನುಗಾರಿಕೆಗೆ ಪ್ರಥಮ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ ಸದೃಢರಾಗಿ ಉತ್ತಮ ಜೀವನ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು. ಇಲ್ಲಿನ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹಾಗೂ ಸಚಿವಾಲಯದಿಂದ ಯಾವುದೇ ರೀತಿಯ ಸಹಕಾರ ಕೊಡಿಸಲು ಸಿದ್ಧವಿರುವುದಾಗಿ ಭರವಸೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೆಲೆಯ ಆಮಿಷಕ್ಕೆ ಒಳಗಾಗಿ ಯಾರೂ ತಮ್ಮ ಜಮೀನುಗಳನ್ನು ಮಾರಾಟ ಮಾಡದಂತೆ ರೈತರಲ್ಲಿ ಮನವಿ ಮಾಡಿದರು. :: ಅನುದಾನ ಘೋಷಣೆ :: ಇದೇ ಸಂದರ್ಭದಲ್ಲಿ ಶಾಸಕರು ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ರಂಗಸಮುದ್ರ ಸಹಕಾರ ದವಸ ಭಂಡಾರ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ತಲಾ 5 ಲಕ್ಷ ರೂಪಾಯಿಗಳ ಅನುದಾನವನ್ನು ಘೋಷಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಸಮುದ್ರ ಸಹಕಾರ ಧವಸ ಭಂಡಾರ ಸಂಘದ ಅಧ್ಯಕ್ಷರಾದ ಎ.ಎಂ.ಲೋಕನಾಥ್ ಅವರು, ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2235ಕ್ಕೂ ಹೆಚ್ಚು ಸದಸ್ಯರು, ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 448 ಸದಸ್ಯರು ಹಾಗೂ ರಂಗಸಮುದ್ರ ಸಹಕಾರ ದವಸ ಭಂಡಾರದಲ್ಲಿ 335ಕ್ಕೂ ಹೆಚ್ಚು ಸದಸ್ಯರು ಸಹಕಾರಿ ತತ್ವದಡಿಯಲ್ಲಿ ಒಂದಾಗಿ ಸಂಸ್ಥೆಯ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಸಂಘಗಳ ಬೆಳವಣಿಗೆಯ ವಿವರ ನೀಡಿದರು. ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮುರುಳಿ ಮಾದಯ್ಯ ಅಧ್ಯಕ್ಷತೆ ವಹಿಸಿದರು. ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಾದ ಬಿ.ಎಂ.ಸಾಗರ್ ಅವರು ಸಂಘಗಳ ಜಾಗದ ದಾಖಲಾತಿಗಳನ್ನು ಸರಿದೂಗಿದ ಒದಗಿಸಿಕೊಟ್ಟ ಅಧಿಕಾರಿಗಳನ್ನು ಸ್ಮರಿಸಿದರು. ಇದೇ ಸಂದರ್ಭ 3 ಸಹಕಾರ ಸಂಘಗಳ ವತಿಯಿಂದ ಶಾಸಕ ಡಾ.ಮಂಥರ್ ಗೌಡ ಹಾಗೂ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ಶಾಲು ಹೊದೆಸಿ ಫಲತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ 3 ಸಹಕಾರ ಸಂಘಗಳ ಉಪಾಧ್ಯಕ್ಷರುಗಳು, ಸರ್ವ ನಿರ್ದೇಶಕ ಮಂಡಳಿಯ ಸದಸ್ಯರುಗಳು, ನೂರಾರುಸಂಖ್ಯೆಯಲ್ಲಿ ಸಹಕಾರಿ ಬಂಧುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ದವಸ ಭಂಡಾರದ ಕಾರ್ಯದರ್ಶಿ ಶಿವಕುಮಾರ್ ಸ್ವಾಗತಿಸಿದರು, ಬಿ.ಎಸ್.ಧನಪಾಲ್ ವಂದಿಸಿದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿರಾಜಪೇಟೆ : ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಕೊಡುಗೆ*

ಜುಲೈ 27, 2026

*ವಿರಾಜಪೇಟೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ : ವೀರಯೋಧರಿಗೆ ನಮನ*

ಜುಲೈ 27, 2026

*ಕರಾಟೆ ಪಂದ್ಯಾವಳಿ : 22 ವಿದ್ಯಾರ್ಥಿಗಳಿಗೆ ಪದಕಗಳ ಗರಿ : ಚೈತನ್ಯ ಅತ್ಯುತ್ತಮ ಸಾಧನೆ*

ಜುಲೈ 27, 2026

*ವಿರಾಜಪೇಟೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ : ವೀರಯೋಧರಿಗೆ ನಮನ*

ಜುಲೈ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಜು.27 NEWS DESK : ಕಾರ್ಗಿಲ್ ಯುದ್ದದಲ್ಲಿ ನಮ್ಮ ಅನೇಕ ವೀರ ಯೋಧರು ಹುತಾತ್ಮರಾಗಿದ್ದು ದೇಶಕ್ಕಾಗಿ ಅವರ ಬಲಿದಾನ…

*ಕರಾಟೆ ಪಂದ್ಯಾವಳಿ : 22 ವಿದ್ಯಾರ್ಥಿಗಳಿಗೆ ಪದಕಗಳ ಗರಿ : ಚೈತನ್ಯ ಅತ್ಯುತ್ತಮ ಸಾಧನೆ*

ಜುಲೈ 27, 2026

*ಅರೆಭಾಷೆ ಅಕಾಡೆಮಿಯಿಂದ ವಿಟ್ಲದಲ್ಲಿ ವಿಜೃಂಭಿಸಿದ ಆಟಿಲೊಂದು ದಿನ*

ಜುಲೈ 27, 2026

*ಕಾರ್ಗಿಲ್ ದಿನಾಚರಣೆ : 143 ಸಂಘ ಸಂಸ್ಥೆಗಳಿಂದ ಮಡಿಕೇರಿಯಲ್ಲಿ ಯೋಧರಿಗೆ ಗೌರವಾರ್ಪಣೆ*

ಜುಲೈ 27, 2026

*ಕೊಡಗು : ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಸಮಾಧಿ ನಿರ್ಮಾಣ : ಹಿಂದೂ ಸಂಘಟನೆಗಳಿದ ಬೃಹತ್ ಪ್ರತಿಭಟನೆ : ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ*

ಜುಲೈ 27, 2026

*ಇಗ್ಗುತ್ತಪ್ಪ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ*

ಜುಲೈ 27, 2026

*ಮನೆಯ ತಡೆಗೋಡೆ ಕುಸಿತ : ಸಂಪಿಗೆಕಟ್ಟೆಯಲ್ಲಿ ಘಟನೆ*

ಜುಲೈ 27, 2026

*ವಿರಾಜಪೇಟೆ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸೆಂಟ್ ಆನ್ಸ್ ಕಾಲೇಜಿನಲ್ಲಿ 2026-27 ನೇ ಶೈಕ್ಷಣಿಕ ಸಾಲಿನ ಎಂ.ಕಾಂ. ಸ್ನಾತಕೋತ್ತರ ಪದವಿ ತರಗತಿ ಪ್ರವೇಶಾತಿ ಆರಂಭ*

ಜುಲೈ 27, 2026

*ಮಾದರಿಯಾದ ಕೊಡಗು ವಿದ್ಯಾಲಯದ ಎನ್.ಸಿ.ಸಿ. ಕೆಡೆಟ್‌ ಗಳು*

ಜುಲೈ 26, 2026

*ಮಡಿಕೇರಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಗಿ೯ಲ್ ವಿಜಯ್ ದಿವಸ್*

ಜುಲೈ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.