ಮಡಿಕೇರಿ ಮಾ.29 : ಪ್ರತಿ ಸೋಮವಾರದ ಸಂತೆ ದಿನ ಸುಮಾರು 5 ಸಾವಿರ ಮಂದಿ ಸೇರುವ ನಾಪೋಕ್ಲು ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿದೆ. ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಗ್ರಾ.ಪಂ ನಿರ್ಲಕ್ಷ್ಯ ವಹಿಸಿದರೆ ಮುಂದೆ ಅಪಾಯ ಕಾದಿದೆ ಎಂದು ಗ್ರಾಹಕರು ಹಾಗೂ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆರ್.ಐ.ಡಿ.ಎಫ್ ಸಹಾಯ ಧನದಡಿಯಲ್ಲಿ ನಾಪೋಕ್ಲು ಗ್ರಾಮೀಣ ಸಂತೆ ನಿರ್ಮಾಣಗೊಂಡಿತು. ಒಟ್ಟು 16 ಬೃಹತ್ ಕಬ್ಬಿಣದ ಕಂಬಗಳ ಮೂಲಕ ಮೇಲ್ಚಾವಣಿ ಅಳವಡಿಸಿ ಕಟ್ಟೆಗಳನ್ನು ನಿರ್ಮಿಸಿ ಸುಸಜ್ಜಿತವಾಗಿಯೇ ಅಂದು ಮಾರುಕಟ್ಟೆಯನ್ನು ಗ್ರಾಹಕರು ಹಾಗೂ ವ್ಯಾಪಾರಿಗಳ ಅನುಕೂಲಕ್ಕಾಗಿ ಅರ್ಪಿಸಲಾಯಿತು. ಆದರೆ ಇಂದು ಮಾರುಕಟ್ಟೆಯ ಕಬ್ಬಿಣದ ಕಂಬಗಳು ಶಿಥಿಲಾವಸ್ಥೆಗೊಂಡಿದ್ದು, ಬೀಳುವ ಹಂತಕ್ಕೆ ತಲುಪಿದೆ. ತಳಭಾಗದಲ್ಲಿ ಕಂಬಗಳು ಶೇ.80 ರಷ್ಟು ತುಕ್ಕು ಹಿಡಿದಿವೆ.
ಜೋರಾಗಿ ಗಾಳಿ ಬಂದರೂ ಕಂಬಗಳು ಮುರಿದು ಮೇಲ್ಚಾವಣಿ ನೆಲಕಚ್ಚುವ ಸಾಧ್ಯತೆಗಳಿದೆ. ವಾರದ ಸಂತೆ ದಿನವಾದ ಪ್ರತಿ ಸೋಮವಾರ ಸುಮಾರು 5 ಸಾವಿರ ಮಂದಿ ಮಾರುಕಟ್ಟೆಗೆ ಬಂದು ಹೋಗುತ್ತಾರೆ. ಮಾರುಕಟ್ಟೆ ಶಿಥಿಲಾವಸ್ಥೆಗೊಂಡಿರುವುದಲ್ಲದೆ ಅಶುಚಿತ್ವದ ವಾತಾವರಣವೂ ಇಲ್ಲಿದೆ. ವಾರ್ಷಿಕ ಮಾರುಕಟ್ಟೆ ಸುಂಕವೆಂದು ಗ್ರಾ.ಪಂ ಗೆ ರೂ.13 ಲಕ್ಷ ಆದಾಯ ಬಂದಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಹಣದ ಕೊರತೆಯೂ ಇಲ್ಲ. ತುರ್ತಾಗಿ ಗ್ರಾ.ಪಂ ಮಾರುಕಟ್ಟೆಯ ದುರಸ್ತಿ ಕಾರ್ಯವನ್ನು ಕೈಗೊಂಡು ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
::: ಅಪಾಯ ಕಾದಿದೆ :::
ನಾಪೋಕ್ಲು ಮಾರುಕಟ್ಟೆಯಲ್ಲಿ ಅಪಾಯ ಕಾದಿದೆ, ಸುಮಾರು 20 ವರ್ಷಗಳ ಹಿಂದೆ ನಿರ್ಮಾಣಗೊಂಡ ಮಾರುಕಟ್ಟೆ ಯಾವಾಗ ಬೇಕಾದರೂ ನೆಲಕಚ್ಚಬಹುದು. ಕಬ್ಬಿಣದ ಕಂಬಗಳು ಸಂಪೂರ್ಣ ತುಕ್ಕು ಹಿಡಿದಿದೆ. ಪ್ರತಿ ಸೋಮವಾರ ಸಾವಿರಾರು ಮಂದಿ ಇಲ್ಲಿ ಸೇರುತ್ತಾರೆ. ಸಾವು ನೋವುಗಳ ಸಂಭವಿಸುವ ಮೊದಲು ಗ್ರಾ.ಪಂ ಎಚ್ಚೆತ್ತುಕೊಂಡು ಕಂಬಗಳನ್ನು ಬದಲಾಯಿಸಬೇಕು. ಮಳೆಗಾಲದೊಳಗೆ ದುರಸ್ತಿ ಕಾರ್ಯ ನಡೆಯದಿದ್ದರೆ ಜೋರಾದ ಗಾಳಿ ಮಳೆಗೆ ಬೀಳುವುದು ಖಚಿತ. (ಕುಲ್ಲೇಟಿರ ಅಜಿತ್ ನಾಣಯ್ಯ, ಬೆಳೆಗಾರರು, ನಾಪೋಕ್ಲು)
::: ಸಭೆಯಲ್ಲಿ ಚರ್ಚೆ :::
ಮುಂದಿನ ಗ್ರಾ.ಪಂ ಸಭೆಯಲ್ಲಿ ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಪ್ರಸ್ತಾಪಿಸಲಾಗುವುದು. ದುರಸ್ತಿ ಕಾರ್ಯಕ್ಕೆ ಸಭಾ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗುವುದು. (ಚೋಂದಕ್ಕಿ, ಅಭಿವೃದ್ಧಿ ಅಧಿಕಾರಿ, ನಾಪೋಕ್ಲು ಗ್ರಾ.ಪಂ)
Breaking News
- *ಶ್ರದ್ಧಾಭಕ್ತಿಯಿಂದ ಜರುಗಿದ ಅರಪಟ್ಟು ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹಾಪೂಜೆ*
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*