ವಿರಾಜಪೇಟೆ ಮಾ.30 NEWS DESK : ವಿರಾಜಪೇಟೆಯ ನಾಟ್ಯಂಜಲಿ ನೃತ್ಯ ಸಂಸ್ಥೆಯ ಗುರು ಕಾವ್ಯಶ್ರೀ ಕಾಂತ್‍ರಾಜ್ ಅವರಿಗೆ ನೃತ್ಯ ಕ್ಷೇತ್ರದಲ್ಲಿನ ವೈಯುಕ್ತಿಕ ಸಾಧನೆ ಹಾಗೂ ವಿದ್ಯಾರ್ಥಿಗಳಿಗೆ ನೀಡುತ್ತಿರುವ ತರಬೇತಿಯನ್ನು ಪರಿಗಣಿಸಿ ರಾಜ್ಯ ಮಟ್ಟದ “ಜ್ಞಾನ ಯೋಗಿ ಶಿವಚರಣೆ ನೀಲಾಂಬಿಕೆ ಪ್ರಶಸ್ತಿ ಲಭಿಸಿದೆ.
ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಬೆಂಗಳೂರಿನ ಬಾಗಲಗುಂಟೆಯ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಕಾವ್ಯಶ್ರೀ ಅಮ್ಮತ್ತಿ ಬಿಳುಗುಂದ ಗ್ರಾಮದ ಹೇಮಾವತಿ, ಕಾಂತ್ ರಾಜ್ ದಂಪತಿಯ ಪುತ್ರಿ. ಪ್ರಸ್ತುತ ಅರಮೇರಿ ಕಳಂಚೇರಿ ಮಠದ ಎಸ್.ಎಂ.ಎಸ್ ವಿದ್ಯಾಪೀಠದ ಶಿಕ್ಷಕಿಯಾಗಿರುತ್ತಾರೆ.









