ಮಡಿಕೇರಿ ಮಾ.30 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪ್ರಸಕ್ತ ಸಾಲಿನ ಮೇ 1 ರಿಂದ 15 ರವರೆಗೆ ನಗರದ ಜಿಲ್ಲಾ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ‘ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಲೆದರ್ ಬಾಲ್ ಪಂದ್ಯಾವಳಿ ನಡೆಯಲಿದೆಯೆಂದು ಫೌಂಡೇಶನ್‍ನ ಮುಖ್ಯ ಸಂಚಾಲಕ ಪೊರ್ಕೊಂಡ ಸುನಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪಂದ್ಯಾವಳಿ ಟಿ-20 ಮಾದರಿಯಲ್ಲಿ ನಡೆಯಲಿದ್ದು, ಹತ್ತು ಫ್ರಾಂಚೈಸಿ ತಂಡಗಳು ಪಾಲ್ಗೊಳ್ಳಲಿವೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಈಗಾಗಲೆ ಸುಮಾರು 200 ಕ್ರಿಕಟ್ ಪಟುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಆಟಗಾರರ ಬಿಡ್ಡಿಂಗ್ ಏ.7ರಂದು ಗೋಣಿಕೊಪ್ಪಲಿನ ಅಶುರಾ ಕೂರ್ಗ್ ಸಭಾಂಗಣದಲ್ಲಿ ನಡೆಯಲಿದೆ ಎಂದರು.
ಪಂದ್ಯಾವಳಿ ವಿಜೇತ ತಂಡಕ್ಕೆ 1.50 ಲಕ್ಷ ರೂ. ನಗದು ಮತ್ತು ಟ್ರೋಫಿ, ದ್ವಿತೀಯ 75 ಸಾವಿರ ರೂ. ನಗದು ಮತ್ತು ಟ್ರೋಫಿ, ತೃತೀಯ 25 ಸಾವಿರ ರೂ. ಮತ್ತು ಟ್ರೋಫಿ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದರೊಂದಿಗೆ ಪ್ರತಿ ಪಂದ್ಯದಲ್ಲೂ ವೈಯಕ್ತಿಕ ಬಹುಮಾನಗಳು ಇರುತ್ತದೆಂದು ತಿಳಿಸಿದರು.
ಪಾಲ್ಗೊಳ್ಳುವ ಫ್ರಾಂಚೈಸಿಗಳು- ಪಂದ್ಯಾವಳಿಯಲ್ಲಿ ಮುಕ್ಕಾಟಿರ ಮ್ಯಾಕ್ ತಿಮ್ಮಯ್ಯ, ಅವರೆಮಾದಂಡ ಶರಣ್ ಪುಣಚ್ಚ ಮತ್ತು ಪಾಡಿಯಂಡ ದೀಪಕ್ ತಿಮ್ಮಯ್ಯ ಮಾಲೀಕತ್ವದ ‘ ಕೊಡವ ಟ್ರೈಬ್’ ತಂಡ, ಪಾಲಚಂಡ ಜಗನ್ ಉತ್ತಪ್ಪ ಅವರ ‘ವೈಲ್ಡ್ ಫ್ಲಾವರ್’, ಕಾಡ್ಯಮಾಡ ಅಭಿಷೇಕ್, ಮೇರಿಯಂಡ ನಿಖಿಲ್ ಬೋಪಯ್ಯ ಮತ್ತು ಪ್ರಣಂ ಮಾಲೀಕತ್ವದ ‘ಕೂರ್ಗ್ ಬ್ಲಾಸ್ಟರ್ಸ್’, ಮಾದಂಡ ತಿಮ್ಮಯ್ಯ, ಚೇಂದಂಡ ನವೀನ್ ಅವರ ‘ಟೀಂ ಪ್ರಗತಿ’, ಚಕ್ಕೇರ ಚಂದ್ರಪ್ರಕಾಶ್, ತೀತಿರ ರೋಷನ್ ಅಪ್ಪಚ್ಚು , ಚಕ್ಕೇರ ಆಕಾಶ್ ಮಾಲೀಕತ್ವದ ‘ಅಂಜಿಗೇರಿ ನಾಡ್’ ತಂಡ, ಬೊಪ್ಪಂಡ ಸೂರಜ್ ಗಣಪತಿ ಅವರ ‘ಟೀಂ ಲೇವರೇಜ್’, ತಂಬುಕುತ್ತೀರ ಮಧು ಮಂದಣ್ಣ ಅವರ ‘ರಾಯಲ್ ಟೈಗರ್ಸ್’, ತಂಬುಕುತ್ತೀರ ರಾಣಿ ಮತ್ತು ತ್ಯಾಗಿ ಮಾಲಿಕತ್ವದ ‘ಎಂಟಿಬಿ ರಾಯಲ್ಸ್’, ಮುಂಡ್ಯೋಳಂಡ ನಂದಾ ನಾಣಯ್ಯ, ಪರವಂಡ ಹೇಮಂತ್, ಮಿಥುನ್ ಮತ್ತು ಬಾಚೆಟ್ಟಿರ ತೇಜಸ್ವಿ ಮಾಲೀಕತ್ವದ ಕೊಡವ ವಾರಿಯರ್ಸ್ ಮತ್ತು ಚೆಟ್ಟಿಯಾರಂಡ ನಿಲನ್ ಗಣಪತಿ, ಕೋಟೇರ ಸುನಿಲ್, ಐಚೋಡಿಯಂಡ ಜೋಯಪ್ಪ ಮಾಲೀಕತ್ವದ ‘ಕೂರ್ಗ್ ಯುನೈಟೆಡ್’ ತಂಡಗಳು ಪಾಲ್ಗೊಳ್ಳಲಿರುವುದಾಗಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಶನ್ ನಿರ್ದೇಶಕರುಗಳಾದ ಕುಲ್ಲೇಟಿರ ಶಾಂತ ಕಾಳಪ್ಪ, ಕಿರಣ್ ಟಿ.ಬಿ, ಪಾಲಚಂಡ ಜಗನ್ ಉತ್ತಪ್ಪ, ಮಡ್ಲಂಡ ದರ್ಶನ್ ಪೆಮ್ಮಯ್ಯ ಹಾಗೂ ಡಾ.ಚೆರುಮಂದಂಡ ಸೋಮಣ್ಣ ಉಪಸ್ಥಿತರಿದ್ದರು.
Breaking News
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*