ಸೋಮವಾರಪೇಟೆ ಏ.1 NEWS DESK : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಶಿವರಾಜ್ ತಂಗಡಿಗಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಮಂಡಲದ ಯುವ ಮೋರ್ಚಾ ವತಿಯಿಂದ ಪಟ್ಟಣದ ಪುಟ್ಟಪ್ಪ ವೃತದ ಸೋಮವಾರ ಪ್ರತಿಭಟನೆ ನಡೆಯಿತು.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಮೋದಿ ವಿರುದ್ಧದ ಸಚಿವ ಶಿವರಾಜ್ ತಂಗಡಿಗಿ ಹೇಳಿಕೆ ಖಂಡನೀಯವಾದುದು. ಪ್ರಧಾನಿ ಮೋದಿಯವರು ದೇಶದ ರಕ್ಷಣೆಗೆ ಹಗಲಿರುಳು ಶ್ರಮಿಸುತಿದ್ದು ಅಂಥವರ ಬಗ್ಗೆ ಅವಹೇಳನಕಾರಿ ಮಾತನಾಡಿರುವ ತಂಗಡಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮಂಡಲ ಯುವ ಮೋರ್ಚಾದ ಅಧ್ಯಕ್ಷ ಮೋಹಿತ್ ಮಾತನಾಡಿ, ಯುವಕರು ಎಲ್ಲೇ ಹೋದರು ಮೋದಿ ಮೋದಿ ಎನ್ನುತ್ತಾರೆ ಅಂತವರಿಗೆ ಕಪಾಳಕ್ಕೆ ಹೊಡಿಯ ಬೇಕು ಎಂದು ಹೇಳುತ್ತಾರೆ. ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸ್ಥಾನಕ್ಕೆ ಅವಮಾನ. ರಾಜ್ಯದ ಮುಖ್ಯಮಂತ್ರಿಗಳು ಅವರಿಗೆ ಒಳೆಯ ಸಂಸ್ಕೃತಿ ಹೇಳಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇವರು ಹೋದಲೆಲ್ಲಾ ಘೇರಾವ್ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.
ಕೊಡಗಿನಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಸರ್ಕಾರಿ ಆಸ್ಪತ್ರೆಗೆ ತಜ್ಞ ವೈದ್ಯರನ್ನು ಕೂಡಲೆ ನೇಮಿಸಬೇಕು. ಹೊಳೆ, ನದಿಗಳಿಂದ ಕೃಷಿಗೆ ನೀರು ಬಳಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ ನವೀನ್ ಕುಮಾರ್ ಮೂಲಕ ಸರ್ಕಾರಕ್ಕೆ ನೀಡಿದರು. ಜಿಲ್ಲಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಮಹೇಶ್ ತಿಮಯ್ಯ, ಪದಾಧಿಕಾರಿಗಳಾದ ಮಿಲನ್. ಜಗನಾಥ್. ದರ್ಶನ್ ಜೋಯಪ್ಪ. ಶರತ್ ಚಂದ್ರ. ಮಹಿಳಾ ಮೋರ್ಚಾದ ತಾಲ್ಲೂಕು ಅಧ್ಯಕ್ಷೆ ತಂಗಮ್ಮ ಪ್ರಮುಖರಾದ ಎಚ್.ಕೆ.ಮಾದಪ್ಪ, ಮಚ್ಚಂಡ ಆಶೋಕ್, ಮೋಹಿನಿ, ನಾಗರತ್ನ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.










