ಸುಂಟಿಕೊಪ ಏ.1 NEWS DESK : ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಸ್ಥಳೀಯ ಶ್ರೀಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಾಲಯದ 56ನೇ ವರ್ಷದ ತೆರೆ ತೆರೆಮಹೋತ್ಸವದಲ್ಲಿ ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಹೊಸಕೋಟೆ, ಗರಗಂದೂರು, ಮಾದಾಪುರ, ಚೆಟ್ಟಳ್ಳಿ, ಭೂತನಕಾಡು, ಕೆದಕಲ್ ಹಾಗೂ ಬಾಳೆಕಾಡು ಭಾಗಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಇಂದು ಮಧ್ಯಾಹ್ನ ಬಾವುಟ ಇಳಿಸುವುದರೊಂದಿಗೆ ತೆರೆ ಮಹೋತ್ಸವ ಸಂಪನ್ನಗೊಂಡಿತು.
ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಉಪಾಧ್ಯಕ್ಷ ಪಿ.ಸಿ.ಮೋಹನ್, ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋಹನ್, ಖಜಾಂಜಿ ರಮೇಶ್ ಪಿಳ್ಳೆ, ಸಹಕಾರ್ಯದರ್ಶಿ ಯಂಕನ ಕೌಶಿಕ್, ಜೀರ್ಣೋದ್ಧಾರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ವೈ.ಎಂ.ಕರುAಬಯ್ಯ, ಕಾರ್ಯದರ್ಶಿ ಶಶಿಕಾಂತರೈ, ಖಜಾಂಜಿ ಎಸ್.ಜಿ.ಶ್ರೀನಿವಾಸ್, ಕೆ.ಪಿ.ಜಗನ್ನಾಥ್, ದೇವಸ್ಥಾನ ಸಮಿತಿ ಮಾಜಿ ಕಾರ್ಯದರ್ಶಿ ಸುರೇಶ್ ಗೋಪಿ, ಎ.ಶ್ರೀಧರನ್, ಧನುಕಾವೇರಪ್ಪ, ಎಂ.ಎಸ್.ಸುನಿಲ್, ಬಿ.ಡಿರಾಜು ರೈ, ದಿನುದೇವಯ್ಯ, ವಿ.ಎ.ಸಂತೋಷ್ ಕುಮಾರ್, ಬಿ.ಕೆ.ಮೋಹನ್, ಕೆ.ಪಿ.ವಿನೋದ್, ದೇವಸ್ಥಾನ ಅರ್ಚಕರಾದ ಮಂಜುನಾಥ ಉಡುಪ, ಮುತ್ತಪ್ಪ ದೇವಸ್ಥಾನ ಪೂಜಾರಿ ಶಿವರಾಮನ್ ಇದ್ದರು.












