ನಾಪೋಕ್ಲು ಏ.2 NEWS DESK : ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಎರಡನೇ ಪರಶಿನಿ ಎಂದು ಪ್ರಖ್ಯಾತವಾಗಿರುವ ನಾಪೋಕ್ಲುವಿನ ಪೊನ್ನು ಮುತ್ತಪ್ಪ ದೇವಾಲಯದ ವಾರ್ಷಿಕ ಉತ್ಸವ ಏ.3 ರಿಂದ 5ರ ವರೆಗೆ ನಡೆಯಲಿದೆ.
ಏ.3 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಹಾಗೂ ಶುದ್ಧ ಕಳಸದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ರಾತ್ರಿ 8.30 ಕ್ಕೆ ಗುರು ಪೂಜೆ ಮತ್ತು ಶ್ರೀ ದೇವಿ ಪೂಜೆ ನಡೆಯಲಿದೆ.
ಏ.4ರಂದು ಮಧ್ಯಾಹ್ನ 3 ಗಂಟೆಗೆ ಪೈ೦ಗುತ್ತಿ, 6 ಗಂಟೆಗೆ ಮುತ್ತಪ್ಪ ದೇವರ ಕಳಸ , ಕಾವೇರಿ ನದಿಯಲ್ಲಿ ಸ್ನಾನದ ಬಳಿಕ ಕೇರಳದ ಚಂಡೆ ವಾದ್ಯದೊಂದಿಗೆ ನಾಪೋಕ್ಲು ಪಟ್ಟಣದ ಮುಖ್ಯಬೀದಿಯಲ್ಲಿ ಮೆರವಣಿಗೆ ಸಾಗಲಿದೆ. ಸಂಜೆ 7.30ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ ಬಳಿಕ ಕುಟ್ಟಿಚಾತ ದೇವರ ಹಾಗೂ ಗುಳಿಗ ವೆಳ್ಳಾಟಂ, ಕುಟ್ಟಿಚಾತ ಕೋಲ ಹಾಗೂ ಶ್ರೀ ತಿರುವಪ್ಪ ಮತ್ತು ಮುತ್ತಪ್ಪ ತೆರೆಗಳು ನಡೆಯಲಿವೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.
ವರದಿ : ದುಗ್ಗಳ ಸದಾನಂದ.