Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಏರುತ್ತಿರುವ ತಾಪಮಾನ : ಮಳೆಗಾಗಿ ಆಕಾಶ ನೋಡುತ್ತಿರುವ ಕೊಡಗಿನ ಬರಿದಾದ ನದಿಗಳು, ಜಲಮೂಲಗಳು
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಏರುತ್ತಿರುವ ತಾಪಮಾನ : ಮಳೆಗಾಗಿ ಆಕಾಶ ನೋಡುತ್ತಿರುವ ಕೊಡಗಿನ ಬರಿದಾದ ನದಿಗಳು, ಜಲಮೂಲಗಳು

ಏಪ್ರಿಲ್ 2, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಮಾ.29 NEWS DESK ವಿಶೇಷ ವರದಿ : ಕಾವೇರಿಯ ತವರು ಜಿಲ್ಲೆ ಕೊಡಗಿನ ನದಿಗಳು ಮತ್ತು ಜಲಮೂಲಗಳೇ ಮಳೆಗಾಗಿ ಆಕಾಶ ನೋಡುವ ಪರಿಸ್ಥಿತಿ ಎದುರಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ನದಿ ನೀರು ಬರಿದಾಗಿದೆ.
ಕಾವೇರಿ ನದಿ ನೀರು ಹರಿಯುವ ಪ್ರದೇಶವೆಲ್ಲವೂ ಬಯಲಿನಂತ್ತಾಗಿದ್ದು, ಬಂಡೆ ಮತ್ತು ಮರಳು ಗೋಚರಿಸುತ್ತಿದೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲೂ ಬಿಸಿಲು ಮಿತಿ ಮೀರಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ನೀರು ಕ್ಷೀಣಿಸಿದ್ದು, ಭಕ್ತರ ಸ್ನಾನಕ್ಕೆ ಕಷ್ಟವಾಗಿದೆ. ನಾಪೋಕ್ಲು ಭಾಗದ ಒಂದೆರಡು ಕಡೆ ಹನಿ ಮಳೆ ಸುರಿದಿದೆಯೇ ಹೊರತು ಈ ವೇಳೆಗೆ ಆಗಬೇಕಾದಷ್ಟು ಪ್ರಮಾಣದಲ್ಲಿ ಮಳೆ ಜಿಲ್ಲೆಯ ಯಾವುದೇ ಭಾಗದಲ್ಲಿ ಆಗಿಲ್ಲ.
ಮಳೆ ಸುರಿಯದ ಕಾರಣ ಮತ್ತು ಕಳೆದ ಮಳೆಗಾಲದಲ್ಲಿ ಸಾಕಷ್ಟು ಮಳೆ ಕೊರತೆಯಾಗಿರುವುದರಿಂದ ಮಾರ್ಚ್ ತಿಂಗಳ ಬಿಸಿಲಿಗೆ ನದಿಗಳು ಬರಡಾಗಿವೆ. ಸಿದ್ದಾಪುರದ ಗುಹ್ಯ- ಅಗಸ್ತೇಶ್ವರ ದೇವಾಲಯ ವ್ಯಾಪ್ತಿಯ ನದಿ ಪ್ರದೇಶ ಮೈದಾನದಂತ್ತಾಗಿದೆ. ಸಾಕಷ್ಟು ನೀರು ಇರುತ್ತಿದ್ದ ದುಬಾರೆಯಲ್ಲಿ ನೀರೇ ಇಲ್ಲದೆ ಪ್ರವಾಸಿಗರು ಬರಿದಾದ ನದಿಯ ಬಂಡೆಕಲ್ಲುಗಳನ್ನು ನೋಡಿ ನಿರಾಶೆಯಿಂದ ಮರಳುತ್ತಿದ್ದಾರೆ. ಇಲ್ಲಿ ನಡೆಯುತ್ತಿದ್ದ ರ್ಯಾಫ್ಟಿಂಗ್ ಜಲಕ್ರೀಡೆಯನ್ನು ನೀರಿನ ಕೊರತೆಯಿಂದ ಸ್ಥಗಿತಗೊಳಿಸಲಾಗಿದೆ. ಮರಳಿನ ತಡೆಗೋಡೆ ನಿರ್ಮಿಸಿ ನೀರು ನಿಲ್ಲಿಸುವ ಪ್ರಯತ್ನ ಮಾಡಲಾಗಿತ್ತು, ಆದರೆ ಈಗ ನೀರೆ ಇಲ್ಲದ ಪರಿಸ್ಥಿತಿ ಉದ್ಭವಿಸಿದೆ.
ಚಿಕ್ಲಿಹೊಳೆ ಸಂಪೂರ್ಣವಾಗಿ ಬರಿದಾಗಿದ್ದು, ಅನೇಕ ವರ್ಷಗಳ ನಂತರ ಇಲ್ಲಿರುವ ವಿಶ್ವನಾಥ ದೇಗುಲ ಗೋಚರಿಸುತ್ತಿದೆ. ಪುರಾತನ ಕಾಲದ ಈ ದೇವಾಲಯವನ್ನು ನದಿ ನೀರು ಆವರಿಸಿಕೊಂಡೇ ಇರುತ್ತಿತ್ತು, ಆದರೆ ಇಂದು ದೇವಾಲಯದ ಬಳಿ ಒಂದು ಹನಿಯೂ ನೀರಿಲ್ಲ. ಚಿಕ್ಲಿಹೊಳೆ ಜಲಾಶಯವನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಈಗ ನೀರಿನ ಬದಲು ಈ ವಿಶ್ವನಾಥನ ದೇವಾಲಯವೇ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಕಾಫಿ ತೋಟಗಳ ಕೆರೆಗಳು ಬತ್ತಿ ಹೋಗಿದ್ದು, ಬೆಳೆಗಾರರು ಗಿಡಗಳಿಗೆ ನೀರು ಹಾಯಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಗಳಲ್ಲಿ ಕೂಡ ನೀರಿಲ್ಲದೆ ಇರುವುದರಿಂದ ಮತ್ತು ಮಳೆ ಬೀಳದ ಕಾರಣ ಗಿಡಗಳಿಗೆ ಹಾನಿಯಾಗಿ ಮುಂದಿನ ವರ್ಷ ಫಸಲು ಕ್ಷೀಣಿಸುವ ಆತಂಕ ಎದುರಾಗಿದೆ. ಕನಿಷ್ಟ ಮೂರು ನಾಲ್ಕು ದಿನ ಉತ್ತಮ ಮಳೆಯಾದರೆ ಒಳಿತು ಎಂದು ಬೆಳೆಗಾರರು ಆಕಾಶ ನೋಡುತ್ತಿದ್ದಾರೆ. ಈಗಾಗಲೇ ವಿವಿಧ ಸಂಘ ಸಂಸ್ಥೆಗಳು, ಭಕ್ತರು, ರೈತರು, ರಾಜಕಾರಣಿಗಳು ಸೇರಿದಂತೆ ಅನೇಕರು ತಲಕಾವೇರಿ ಹಾಗೂ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದರೆ ಮಳೆ ಬಾರದೆ ಜನ ಕಂಗಾಲಾಗಿದ್ದಾರೆ.
ಜಿಲ್ಲೆಯ ನದಿ, ಜಲಮೂಲಗಳಂತೆ ಕೆರೆ, ಕೊಳವೆ ಬಾವಿಗಳು ಕೂಡ ಬತ್ತಿ ಹೋಗುತ್ತಿವೆ. ಅನೇಕ ಗ್ರಾ.ಪಂ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ತಲುಪಿಸುವ ಪರಿಕಲ್ಪನೆ ವಿಫಲವಾಗುತ್ತಿದೆ. ನೀರೇ ಇಲ್ಲದ ಮೇಲೆ ನೀರು ಸರಬರಾಜು ಮಾಡುವುದು ಹೇಗೆ ಎನ್ನುವುದು ಗ್ರಾ.ಪಂ ಗಳ ಅಸಹಾಯಕ ಪ್ರಶ್ನೆಯಾಗಿದೆ. ಒಂದೆರಡು ದಿನಗಳಲ್ಲಿ ಜಿಲ್ಲೆಗೆ ಉತ್ತಮ ಮಳೆಯಾಗದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಬಹುದು.
ಕಾವೇರಿ ನಾಡಿನಲ್ಲೇ ನೀರಿಗಾಗಿ ಆಹಾಕಾರ ಆರಂಭಗೊಂಡಿರುವುದರಿಂದ ಕಾವೇರಿ ನದಿ ನೀರನ್ನು ಅವಲಂಬಿಸಿರುವ ಅಕ್ಕಪಕ್ಕದ ಜಿಲ್ಲೆಗಳ ಜನ ಕುಡಿಯಲು ಕೂಡ ನೀರಿಲ್ಲದೆ ಪರದಾಡುತ್ತಿದ್ದಾರೆ.
ಒಂದೆಡೆ ನದಿಗಳು ಬರಿದಾಗುತ್ತಿದ್ದರೆ ಮತ್ತೊಂದೆಡೆ ಬಿಸಿಲಿನ ಬೇಗೆ ಜನರನ್ನು ಹೈರಾಣಾಗಿಸಿದೆ. ಸದಾ ಹವಾಗುಣದ ಸಮತೋಲವನ್ನು ಕಾಯ್ದುಕೊಂಡು ಬರುತ್ತಿದ್ದ ದಕ್ಷಿಣದ ಕಾಶ್ಮೀರ ಖ್ಯಾತಿಯ ಕೊಡಗಿನಲ್ಲಿ ಈ ಮಾರ್ಚ್ ತಿಂಗಳಿನಲ್ಲಿ ಉಷ್ಣಾಂಶ 35 ರಿಂದ 39 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಳಿತವಾಗುತ್ತಿದೆ. ಇಷ್ಟು ತಾಪಮಾನವನ್ನು ಹಿಂದೆ ಎಂದೂ ಅನುಭವಿಸಿಲ್ಲ ಎಂದು ಹಿರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೂರ್ಗ್ ಕೂಲ್ ಇರಬಹುದು ಎಂದು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಆದರೆ ಇಲ್ಲಿನ ಉಷ್ಣಾಂಶ ಮತ್ತು ನೀರಿಲ್ಲದ ಪರಿಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲೇ ಹೀಗಾದರೆ ಏಪ್ರಿಲ್, ಮೇ ತಿಂಗಳ ಸ್ಥಿತಿ ಏನು ಎಂದು ನಿರಾಶೆಯಿಂದ ಮರಳುತ್ತಿದ್ದಾರೆ.
ವನ್ಯಜೀವಿಗಳು ಕೂಡ ಮನುಷ್ಯರಂತೆ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಕಾಡಿನಲ್ಲಿ ಕೆರೆಗಳು ಬತ್ತಿ ಹೋಗಿರುವುದರಿಂದ ತೋಟಗಳ ಕೆರೆಗಳನ್ನು ಹುಡುಕಿಕೊಂಡು ಕಾಡಾನೆಗಳು ಬರುತ್ತಿವೆ. ಆದರೆ ಇಲ್ಲಿಯೂ ನದಿ, ಕೆರೆಗಳು ಬತ್ತಿ ಹೋಗಿದ್ದು, ಅಸಹಾಯಕ ಸ್ಥಿತಿ ಎದುರಾಗಿದೆ. ಅತಿಯಾದ ಬಿಸಿಲು ಮತ್ತು ಕಾಡ್ಗಿಚ್ಚಿನಿಂದ ಹಸಿರು ನಾಶವಾಗುತ್ತಿದ್ದು, ಕಾಡುಪ್ರಾಣಿಗಳಿಗೆ ಆಹಾರದ ಕೊರತೆಯೂ ಎದುರಾಗಿದೆ.
ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಜನ ಆಯಾಸ ಮತ್ತು ಅನಾರೋಗ್ಯವನ್ನು ಎದುರಿಸುತ್ತಿದ್ದು, ಕೆಲಸ, ಕಾರ್ಯಗಳಲ್ಲಿ ಅಸಡ್ಡೆ ಕಾಡುತ್ತಿದೆ. ತುರ್ತಾಗಿ ಒಂದೆರಡು ಮಳೆಯಾದರೆ ಮಾತ್ರ ಮನುಷ್ಯ, ವನ್ಯಜೀವಿ ಮತ್ತು ಅರಣ್ಯದ ಪರಿಸ್ಥಿತಿ ಸುಧಾರಿಸಬಹುದಾಗಿದೆ. ಇಲ್ಲದಿದ್ದಲ್ಲಿ ಆತಂಕದ ಛಾಯೆ ಎದುರಾಗಬಹುದು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿ ದಸರಾ ಜನೋತ್ಸವಕ್ಕೆ ಸಂಭ್ರಮದ ತೆರೆ : ಶ್ರೀ ಕರವಲೆ ಭಗವತಿ ದೇವಾಲಯದ ಮಂಟಪಕ್ಕೆ ಪ್ರಥಮ ಬಹುಮಾನ

ಅಕ್ಟೋಬರ್ 22, 2026

ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರಿಗೆ ಗೌರವ ನಮನ : ಮಡಿಕೇರಿಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ* 

ಅಕ್ಟೋಬರ್ 21, 2026

ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳ ಸಂಭ್ರಮ : ಡಿಜೆಗೆ ಕುಣಿದು ಕುಪ್ಪಳಿಸುತ್ತಿರುವ ಜನ ಸಾಗರ

ಅಕ್ಟೋಬರ್ 21, 2026

ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರಿಗೆ ಗೌರವ ನಮನ : ಮಡಿಕೇರಿಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ* 

ಅಕ್ಟೋಬರ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ NEWS DESK ಅ.21 : ಕರ್ತವ್ಯದ ವೇಳೆ ದೇಶದ ರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಪ್ರಾಣತ್ಯಾಗ ಮಾಡಿದ ಪೊಲೀಸ್‌…

ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳ ಸಂಭ್ರಮ : ಡಿಜೆಗೆ ಕುಣಿದು ಕುಪ್ಪಳಿಸುತ್ತಿರುವ ಜನ ಸಾಗರ

ಅಕ್ಟೋಬರ್ 21, 2026

ಅ.26ರಂದು ನಾಪೋಕ್ ನಲ್ಲಿ ಸಿಎನ್‌ಸಿಯ 7ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ

ಅಕ್ಟೋಬರ್ 21, 2026

ಕಾರು ಕೆರೆಗೆ ಬಿದ್ದು ಮಗು ಸೇರಿ ಮೂವರ ಸಾವು

ಅಕ್ಟೋಬರ್ 21, 2026

31 ವರ್ಷಗಳಿಂದ ಮನೆಮನೆಗೆ ಕಾವೇರಿ ತೀರ್ಥ ವಿತರಣೆ: ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಧಾರ್ಮಿಕ ಸೇವೆ

ಅಕ್ಟೋಬರ್ 20, 2026

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 20, 2026

ವಿರಾಜಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾರದಾ, ಲಕ್ಷ್ಮಿ ಪೂಜೆ

ಅಕ್ಟೋಬರ್ 19, 2026

ವಿರಾಜಪೇಟೆ ಮಹಿಳಾ ಸಹಕಾರ ಸಂಘದಿಂದ ಶಾರದಾ ಪೂಜೆ

ಅಕ್ಟೋಬರ್ 19, 2026

ಗೋಣಿಕೊಪ್ಪ ದಸರಾದಲ್ಲಿ ಗಮನ ಸೆಳೆದ ಗೀತೆಗಳ ಗಾನಸುಧೆ, ಮಕ್ಕಳ ನೃತ್ಯ ವೈಭವ

ಅಕ್ಟೋಬರ್ 19, 2026

ಟಿ. ಶೆಟ್ಟಿಗೇರಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಆಟೋ ತಂಗುದಾಣ ಲೋಕಾರ್ಪಣೆ

ಅಕ್ಟೋಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.