ಮಡಿಕೇರಿ ಏ.2 NEWS DESK : ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್-ಎಸ್‍ಯುಸಿಐಸಿ) ಪಕ್ಷ ಈ ಬಾರಿ ಮೈಸೂರು-ಕೊಡಗು ಕ್ಷೇತ್ರವನ್ನು ಒಳಗೊಂಡಂತೆ ರಾಜ್ಯದ 19 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲಿದೆಯೆಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ರವಿ ಬಿ. ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು-ಕೊಡಗು ಕ್ಷೇತ್ರದಿಂದ ಪಿರಿಯಾಪಟ್ಟಣದ ಸುನಿಲ್ ಟಿ.ಆರ್. ಅವರು ಎಸ್‍ಯುಸಿಐ(ಸಿ) ಪಕ್ಷದ ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಮಾ.28 ರಂದು ಸಲ್ಲಿಸಿದ್ದಾರೆ, ಇವರನ್ನು ಜನ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷವು 19 ರಾಜ್ಯಗಳ 151 ಕ್ಷೇತ್ರಗಳಿಂದ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಬಿಜೆಪಿ-ಕಾಂಗ್ರೆಸ್ ಅವಳಿ ಜವಳಿ- ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಸಮಾಜದ ಕಡೆಗಣಿಸಲ್ಪಟ್ಟ ಜನಸಮೂಹದ ಉದ್ಧಾರಕ್ಕೆ ಬದಲಾಗಿ, ತಮ್ಮ ಅಧಿಕಾರದಲ್ಲಿ ಬಂಡವಾಳಶಾಹಿಗಳಿಗೆ ಅನುಕೂಲವಾಗುವ ನಿಟ್ಟಿನ ಧೋರಣೆ, ನೀತಿಗಳನ್ನು ಹೊಂದಿವೆ. ಈ ಪಕ್ಷಗಳೆರಡು ‘ಅವಳಿ ಜವಳಿ’ಯಾಗಿದ್ದು, ಯಾವುದೇ ವ್ಯತ್ಯಾಸವಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರದ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ 2014 ರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳು ಏನಾಗಿದೆಯೆಂದು ಪ್ರಶ್ನಿಸಿದ ರವಿ, ತಾವು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಲ್ಲಿ ಲೋಕಪಾಲ ಮಸೂದೆ ಜಾರಿ ಮಾಡುವುದಾಗಿ ಹೇಳಿದ್ದ ಬಿಜೆಪಿ ಅದನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ. ಇದಕ್ಕೆ ಬದಲಾಗಿ ಚುನಾವಣೆಗೆ ಹಣ ಸಂಗ್ರಹಿಸುವ ಇಲೆಕ್ಟ್ರಾಲ್ ಬಾಂಡ್‍ನ್ನು ತಂದಿದೆ. ಆ ಮೂಲಕ ತನಿಖೆಗೆ ಒಳಪಟ್ಟ ಸಂಸ್ಥೆಗಳು ನೀಡಿದ ದೇಣಿಗೆಯನ್ನು ಬಿಜೆಪಿ ಪಡೆದಿದೆ. ಪ್ರಸ್ತುತ ಬಿಜೆಪಿಗೆ ಪರ್ಯಾಯವೆಂದು ಬಿಂಬಿಸುತ್ತಿರುವ ಐಎನ್‍ಡಿಐಎ ಒಕ್ಕೂಟದ ಕಾಂಗ್ರೆಸ್ ಪಕ್ಷವೂ ಬಾಂಡ್‍ಗಳನ್ನು ಪಡೆದುಕೊಂಡಿದೆ. ವಿವಿಧ ಎಡಪಕ್ಷಗಳು ಬಿಜೆಪಿಯನ್ನು ಹೊರಗಿಡಲು ಐಎನ್‍ಡಿಐಎ ಒಕ್ಕೂಟಕ್ಕೆ ಬೆಂಬಲವನ್ನು ನೀಡಿವೆಯಾದರು, ಎಸ್‍ಯುಸಿಐ(ಸಿ) ಪಕ್ಷ ಅದರಿಂದ ದೂರ ಉಳಿದು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.
ವಿದೇಶಗಳಲ್ಲಿ ಹೂಡಿಕೆಯಾದ ಕಪ್ಪುಹಣವನ್ನು ಮರಳಿ ತರುವ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ಪಕ್ಷವು ಇಂದು ಅದರ ಬಗ್ಗೆ ಮಾತನಾಡುತ್ತಿಲ್ಲ್ಲ. ಬದಲಾಗಿ ‘ವಿಕಸಿತ ಭಾರತ’ದ ಬಗ್ಗೆ ಮಾತನಾಡುತ್ತಿದೆ. ವಿಶಾಲವಾದ ಭಾರತ ದೇಶದಲ್ಲಿ ಉತ್ಪಾದನಾ ಸಾಮಥ್ರ್ಯ ಹೆಚ್ಚಾಗಿರುವುದರಿಂದ ಅದರ ಜಿಡಿಪಿ 5 ನೇ ಸ್ಥಾನದಲ್ಲಿದೆ, ಮುಂದೆ ಅದು 3ನೇ ಸ್ಥಾನಕ್ಕೂ ಏರಬಹುದು. ಆದರೆ, ಜಿಡಿಪಿ ಹೆಚ್ಚಳ ರಾಷ್ಟ್ರದ ಅಭಿವೃದ್ಧಿಯ ಮಾನದಂಡವೆ ಎಂದು ಪ್ರಶ್ನಿಸಿದರು.
ಎಸ್‍ಯುಸಿಐ(ಸಿ) ಪಕ್ಷದ ಅಭ್ಯರ್ಥಿ ಸುನಿಲ್ ಟಿ.ಆರ್. ಮಾತನಾಡಿ, ಜನಸಾಮಾನ್ಯರ ಮೂಲಭೂತ ಸಂಕಷ್ಟಗಳ ಬಗ್ಗೆ, ಕಾರ್ಮಿಕ ಸಮೂಹದ ಸಮಸ್ಯೆಗಳ ಬಗ್ಗೆ ಚರ್ಚೆಗಳಿಂದು ನಡೆಯಬೇಕಿದೆಯಾದರು, ಇವುಗಳನ್ನು ಬಿಟ್ಟು ಜಾತಿ ಧರ್ಮದ ವಿಚಾರಗಳೆ ಪ್ರಮುಖ ಚರ್ಚಾ ವಿಷಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರ ಮೂಲಭೂತ ಹಕ್ಕುಗಳಿಗಾಗಿ ತಾನು ಗೆದ್ದು ಬಂದಲ್ಲಿ ಶ್ರಮಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್‍ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯರಾದ ಉಮಾ ದೇವಿ ಹಾಗೂ ಜಿಲ್ಲಾ ಪ್ರಮುಖ ಸುಭಾಷ್ ಶಾಂತಳ್ಳಿ ಉಪಸ್ಥಿತರಿದ್ದರು.
Breaking News
- *ಲಾರಿ ಡಿಕ್ಕಿಯಾಗಿ ಬಾಲಕಿ ಸಾವು*
- *ಅದವಿಯಾಗೆ ಅಭಿನಂದನೆ*
- *ನಿಧನ ಸುದ್ದಿ*
- *ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ಸುಪ್ರೀಂ ಕೋರ್ಟಲ್ಲಿ ವಜಾ*
- *ಕಾರಾಗೃಹ ವಾರ್ಡನ್ ಹುದ್ದೆಗೆ ಆಹ್ವಾನ*
- *ವೀರ ಸೇನಾನಿಗಳಿಗೆ ಅಗೌರವ : ಕುಲಾಲ ಕುಂಬಾರ ಸಂಘ ಖಂಡನೆ*
- *ಡಿ.1 ರಂದು ಜಿಲ್ಲಾ ಮಟ್ಟದ ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆ*
- *ಆರೋಪಿಯ ಗಡಿಪಾರಿಗೆ ಹಿಂದು ಜಾಗರಣ ವೇದಿಕೆ ಒತ್ತಾಯ*
- *ಸೋಮವಾರಪೇಟೆ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧಾ ಕಾರ್ಯಕ್ರಮ*
- *ಸೋಮವಾರಪೇಟೆ : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ : ಹಿರಿಯ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ*