ಮಡಿಕೇರಿ ಏ.2 NEWS DESK : ಕೊಡಗು ಗೌಡ ಯುವ ವೇದಿಕೆಯು 25ನೇ ವರ್ಷದ ಗೌಡ ಕ್ರೀಡಾಕೂಟದ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ಏ.17 ರಿಂದ 28ರ ವರೆಗೆ ಮಡಿಕೇರಿಯಲ್ಲಿ ಗೌಡ ಲೆದರ್ ಬಾಲ್ ಸೀಸನ್-2 ಪಂದ್ಯಾವಳಿ ಹಾಗೂ ಇದೇ ಪ್ರಥಮ ಬಾರಿಗೆ ಮಹಿಳಾ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ ಎಂದು ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 12 ದಿನಗಳ ಕಾಲ ಪಂದ್ಯಾವಳಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿದೆ ಎಂದು ಮಾಹಿತಿ ನೀಡಿದರು.
ಪಂದ್ಯಾವಳಿಯ ಬಿಡ್ಡಿಂಗ್ ಪ್ರಕ್ರಿಯೆಯು ಈಗಾಗಲೇ ನಡೆದಿದ್ದು, 10 ಫ್ರಾಂಚೈಸಿ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ. ಕ್ರೀಡಾಕೂಟದ ಎಲ್ಲಾ ಪಂದ್ಯಾವಳಿಗಳು ಯೂಟ್ಯೂಬ್ ನಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ ಮೈದಾನದಲ್ಲಿ ಡಿಜಿಟಲ್ ಎಲ್ ಇ ಡಿ ಸ್ಕೋರ್ ಬೋರ್ಡನ್ನು ಅಳವಡಿಸಲಾಗುವುದು ಎಂದರು.
ಪಂದ್ಯಾವಳಿ ವೀಕ್ಷಣೆಗೆ ಬಂದ ಪ್ರೇಕ್ಷಕರಿಗೆ ಅನುಕೂಲವಾಗಲು ಮಳಿಗೆಗಳು ಮತ್ತು ಇತರ ಆಟೋಟ ಚಟುವಟಿಕೆಗಳ ಮಳಿಗೆಗಳನ್ನು ಇಡಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಈ ಕ್ರೀಡಾಕೂಟದ ಟೈಟಲ್ ಪ್ರಾಯೋಜಕತ್ವವನ್ನು “ಟೋಟಲ್ 1 ಸ್ಟಾಪ್ ಟೂಲ್ಸ್ ಜಿಪಿಎಲ್ ಪವರ್ಡ್ ಬೈ ತುಂತುರು” ಎಂದು ಹೆಸರಿಡಲಾಗಿದ್ದು, ಉತ್ತಮ ದರ್ಜೆಯ ಕೃಷಿ ಸಹಾಯಕ ಉತ್ಪನ್ನಗಳನ್ನು ಹೊಂದಿದೆ. ಕೊಡಗಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಬೆಳ್ಳಿ ಮಹೋತ್ಸವದ ಪ್ರಯುಕ್ತ ಏ.27 ಮತ್ತು 28 ರಂದು ಗೌಡ ಮುಕ್ತ ಮಹಿಳಾ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಗ್ರಾಮವಾರು ಸಾಂಸ್ಕೃತಿಕ ಪೈಪೆÇೀಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆಸಕ್ತರು ಏ.22ರ ಒಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಕ್ರೀಡಾಕೂಟದ ನಂತರ ಕೊಡಗು ಗೌಡ ಯುವ ವೇದಿಕೆ ಗೌಡ ಜನಾಂಗದ ಇತಿಹಾಸ, ಆಚಾರ, ವಿಚಾರಗಳು ಸೇರಿದಂತೆ ವಿವಿಧ ಮಾಹಿತಿಯುಳ್ಳ ಸ್ಮರಣ ಸಂಚಿಕೆಯನ್ನು ಹೊರತರ ತರಲಾಗುತ್ತಿದೆ ಎಂದರು.
ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲು ಈಗಾಗಲೇ ತಂಡವನ್ನು ರಚಿಸಲಾಗಿದ್ದು, ಸಂಚಾಲಕರಾಗಿ ಪುದಿಯನೆರವನ ರೇವತಿ ರಮೇಶ್, ಗೌರವ ಸಲಹೆಗಾರರಾಗಿ ಮೂಟೆರ ಪುಷ್ಪಾವತಿ ಆಯ್ಕೆಯಾಗಿದ್ದಾರೆ.
ಸಹ ಸಂಚಾಲಕರಾಗಿ ಚೊಕ್ಕಾಡಿ ಪ್ರೇಮ ರಾಘವಯ್ಯ, ತಳೂರು ಉಷಾರಾಣಿ, ದುಗ್ಗಳ ಕಾವ್ಯ ಕಪಿಲ್, ಕುದುಕುಳಿ ಇಂದಿರಾ ಭರತ್, ಪಡನೋಳನ ಪವಿತ್ರ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಗೌಡ ಮಹಿಳಾ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಮಹಿಳಾ ಕ್ರಿಕೆಟ್ ಕಪ್ ಸಂಚಾಲಕಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಕೊಡಗು ಗೌಡ ಯುವವೇದಿಕೆ ಕಳೆದ 25 ವರ್ಷಗಳಿಂದ ಜಿಲ್ಲೆಯ ಗೌಡ ಜನಾಂಗದವರನ್ನು ಒಟ್ಟುಗೂಡಿಸಿ ಅನೇಕ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಜಿಲ್ಲೆಯ ಹಳ್ಳಿ ಹಳ್ಳಿಗಳಿಂದ ಯುವ ಪ್ರತಿಭೆಗಳನ್ನು ಆಹ್ವಾನಿಸಿ ವೇದಿಕೆ ನೀಡುತ್ತಾ ಬಂದಿದೆ. ಜನಾಂಗದ ಸಂಪ್ರದಾಯ, ಆಚಾರ, ವಿಚಾರ, ಸಂಸ್ಕøತಿ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುತ್ತ ಅತ್ಯುತ್ತಮ ಸಂಘಟನೆಯಾಗಿ ಬೆಳೆದು ಇಂದು 25 ವರ್ಷಗಳ ಯಶಸ್ವಿ ಸಾಧನೆಯತ್ತ ಮುನ್ನಡೆಯುತ್ತಾ ಬೆಳ್ಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದೆ ಎಂದು ಹೇಳಿದರು.
25 ವರ್ಷಗಳ ಯಶಸ್ವಿ ಪ್ರಯಾಣದತ್ತ ಸಾಗಿದ ಈ ಸಂಘಟನೆಯೂ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಜನಾಂಗದ ಮಹಿಳೆಯರಿಗಾಗಿ ಇದೇ ಪ್ರಪ್ರಥಮ ಬಾರಿಗೆ ಕ್ರಿಕೆಟ್ ಕಪ್ ಅನ್ನು ನಡೆಸಲು ಮುನ್ನಡಿ ಇಟ್ಟಿದೆ.
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮಣಿಗಳು ಕ್ರೀಡಾಪಟುಗಳಾಗಿ ತಮ್ಮ ತಮ್ಮ ತಂಡವನ್ನು ರಚಿಸಿಕೊಂಡು ಯಾವುದೇ ವಯಸ್ಸಿನ ಮಿತಿ ಇಲ್ಲದ 5 ಓವರ್‍ನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.
ಗೌರವ ಸಲಹೆಗಾರರಾದ ಮೂಟೇರ ಪುಷ್ಪಾವತಿ ಮಾತನಾಡಿ, ಏ.27 ಮತ್ತು 28 ರಂದು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 10 ಕುಟುಂಬ 18 ಗೋತ್ರದ ಮುಕ್ತ ಮಹಿಳಾ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ತಂಡದಲ್ಲಿ ಗರಿಷ್ಟ 9 ಆಟಗಾರರನ್ನು ಹೊಂದಿರಬೇಕು. ಓವರ್ ಆರ್‍ಮ್ ಬೌಲಿಂಗ್‍ನೊಂದಿಗೆ ಥ್ರೋ ಬೌಲಿಂಗ್‍ಗೂ ಅವಕಾಶ ಇರುತ್ತದೆ ಎಂದರು.
ಟೆನ್ನಿಸ್ ಬಾಲ್‍ನ ಇನ್ನಿತರ ಎಲ್ಲಾ ನಿಯಮಗಳನ್ನು ಅಳವಡಿಸಲಾಗುವುದು. ತಂಡದ ನೊಂದಾವಣಿ ಶುಲ್ಕ ರೂ.2,000 ಆಗಿದ್ದು, ಪ್ರಥಮ ವಿಜೇತ ತಂಡಕ್ಕೆ ರೂ. 20,000 ನಗದು ಹಾಗು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.10,000 ನಗರದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ.5,000 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೇ ವೈಯಕ್ತಿಕ ಬಹುಮಾನಗಳಾದ ವುಮೆನ್ ಆಫ್‍ದ ಟುರ್ನಮೆಂಟ್, ವುಮೆನ್ ಆಫ್‍ದ ಮ್ಯಾಚ್, ಬೆಸ್ಟ್ ಬ್ಯಾಟರ್, ಬೆಸ್ಟ್ ವಿಕೆಟ್ ಕೀಪರ್ ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ತಂಡಗಳ ನೊಂದಾಣಿಗಾಗಿ ಪರಿಚನ ಸೋನಿ ಶರತ್-7676452107, ಪುದಿಯನೆರವನ ರೇವತಿ ರಮೇಶ್-9663254829, ಮೂಟೇರ ಪುಷ್ಪಾವತಿ-6362814659 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಯುವ ವೇದಿಕೆ ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್, ಮಹಿಳಾ ಕ್ರಿಕೆಟ್ ಕಪ್ ಸಹ ಸಂಚಾಲಕರಾದ ಚೊಕ್ಕಾಡಿ ಪ್ರೇಮರಾಘವಯ್ಯ, ದುಗ್ಗಳ ಕಾವ್ಯ ಕಪಿಲ್ ಉಪಸ್ಥಿತರಿದ್ದರು.