ವಿರಾಜಪೇಟೆ ಏ.8 NEWS DESK : ಬಿಟ್ಟಂಗಾಲ ಕಂಪೆನಿಮೊಟ್ಟೆ ಪ್ರಾರ್ಥನಾ ಶ್ರೀಮುತ್ತಪ್ಪ ದೇವಾಲಯದ 32ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವವು ಏ.9 ಮತ್ತು 10 ರಂದು ನಡೆಯಲಿದೆ.
ಗಣಪತಿ ಹೋಮ, ಕನ್ನಂಬಾಡಿ ಅಮ್ಮನ ಪೂಜೆ, ಮುತ್ತಪ್ಪ ವೆಳ್ಳಾಟ0, ಗುಳಿಗನ್ ತೆರೆ, ವಸುರಿಮಾಲಾ ತೆರೆ ಸೇರಿದಂತೆ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ.
ಭಕ್ತಾಧಿಗಳಿಗೆ ಎರಡು ದಿನ ಅನ್ನದಾನ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.




































