ಮಡಿಕೇರಿ ಏ.11 NEWS DESK : ಲೋಕಸಭಾ ಚುನಾವಣಾ ಹಿನ್ನೆಲೆ ಪೊನ್ನಂಪೇಟೆ ಬ್ಲಾಕ್ ವ್ಯಾಪ್ತಿಯ ಕುಟ್ಟದಲ್ಲಿ ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ ಅವರ ಪರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಮತಯಾಚಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಕೇವಲ ಭೂಮಿ ಪೂಜೆ ಮಾಡಿ ಹೋಗುವುದು ನಮ್ಮ ಅಭಿವೃದ್ಧಿಯಲ್ಲ, ಕೊಡಗು-ವಿರಾಜಪೇಟೆಯನ್ನು ಯಾರು ಕೇಳರಿಯದ ರೀತಿಯಲ್ಲಿ ಅಭಿವೃದ್ಧಿಗೆ ಕೊಂಡೊಯ್ಯುವ ಪಣ ನಮ್ಮದು ಎಂದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ , ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಮಾಜಿ ಎಂ.ಎಲ್.ಸಿ ಅರುಣ್ ಮಾಚ್ಚಯ್ಯ , ಹಿರಿಯ ಮುಖಂಡರಾದ ಹೆಚ್.ಎಸ್.ಚಂದ್ರಮೌಳಿ ಇತರೆ ಮುಖಂಡರು, ಸ್ಥಳೀಯರು ಹಾಜರಿದ್ದರು.






