Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿರಾಜಪೇಟೆ : ಗಣೇಶ ವಿಸರ್ಜನೆ ಶೋಭಾಯಾತ್ರೆ ಸಂದರ್ಭ ವಿದ್ಯುತ್ ಅವಘಡ : ಐವರಿಗೆ ಗಾಯ : ಇಬ್ಬರ ಸ್ಥಿತಿ ಗಂಭೀರ*
  • *ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕೊಡಗಿನಲ್ಲಿ ಜನಜಾಗೃತಿ : 50 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನ ಜಾಥಾ*
  • *ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ*
  • *ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ : ಮಡಿಕೇರಿಯಲ್ಲಿ ಪ್ರತಿಭಟನೆ*
  • *ಕಡಿಯತನಾಡ್‌ನ ಕುರಿತು ಬೃಹತ್ ಅಧ್ಯಯನ ಕೃತಿ ಬಿಡುಗಡೆ : ಮೊದಲ ಬಾರಿಗೆ ನಾಡಿನ ಸಮಗ್ರ ಅಧ್ಯಯನ : ಬೆಂಗಳೂರಿನಲ್ಲಿ ಸೆ.27 ರಂದು ಲೋಕಾರ್ಪಣೆ*
  • *ಸೆ.27ರಂದು ಸ್ವಚ್ಛತಾ ಕಾರ್ಯಕ್ರಮ*
  • *ಸುಂದರನಗರದಲ್ಲಿ ಬೀದಿ ನಾಯಿಗಳ ಹಾವಳಿ : ವೃದ್ಧರ ಮೇಲೆ ದಾಳಿ : ಕ್ರಮಕ್ಕೆ ಒತ್ತಾಯ*
  • *ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಮಗ್ರ ಉಚಿತ ಆರೋಗ್ಯ ಶಿಬಿರ*
  • *ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆ ಆರಂಭ*
  • *ಮಡಿಕೇರಿ ನಗರ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಶ್ರಮಿಕ ಸಮೂಹ ಸ್ವಾತಂತ್ರ್ಯ ಕಳೆದುಕೊಳ್ಳುವ ಆತಂಕದಲ್ಲಿದೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಶ್ರಮಿಕ ಸಮೂಹ ಸ್ವಾತಂತ್ರ್ಯ ಕಳೆದುಕೊಳ್ಳುವ ಆತಂಕದಲ್ಲಿದೆ*

ಏಪ್ರಿಲ್ 16, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.16 NEWS DESK : ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಳೆದ 10 ವರ್ಷಗಳಿಂದ ಆಡಳಿತ ನಡೆಸಿದ ಕೇಂದ್ರದ ಬಿಜೆಪಿ ಸರ್ಕಾರದಿಂದ ಶ್ರಮಿಕ ಸಮೂಹ ಸ್ವಾತಂತ್ರ್ಯ ಕಳೆದುಕೊಳ್ಳುವ ಆತಂಕದಲ್ಲಿದೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕವರ್ಗ ಹಾಗೂ ರೈತ ಸಮೂಹ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಮತದಾನ ಮಾಡಬೇಕೆಂದು ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ತನ್ನ ಆಡಳಿತದ ಅವಧಿಯಲ್ಲಿ ಜನರ ಹಸಿವಿನ ಪ್ರಶ್ನೆಗಳಿಗೆ, ಒಕ್ಕೂಟ ವ್ಯವಸ್ಥೆಯ ರಕ್ಷಣೆಯ ಬಗ್ಗೆ, ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಂಭೀರ ಚಿಂತನೆಗಳನ್ನು ಮಾಡಿಲ್ಲ. ರಾಷ್ಟ್ರದ ಆರ್ಥಿಕ ಶಕ್ತಿಗೆ ಪೂರಕವಾಗಿದ್ದ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಬಂಡವಾಳಶಾಹಿಗಳನ್ನು ರಕ್ಷಿಸುವ ಪ್ರಯತ್ನಗಳನ್ನಷ್ಟೆ ಮಾಡಿದೆ ಎಂದು ಆರೋಪಿಸಿದರು.
ಈ ಲೋಕಸಭಾ ಚುನಾವಣೆ ದೇಶದ ಆರ್ಥಿಕತೆಯನ್ನು, ಜನರ ಸಾಮಾಜಿಕ ಪರಿಸ್ಥಿತಿಗಳನ್ನು ನಿರ್ಧರಿಸುವ ಚುನಾವಣೆಯಾಗಿದೆ. ಹಸಿವಿನ ಭಾರತ ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗುತ್ತಿದೆ ಎನ್ನುವ ಕೇಂದ್ರದ ಬಿಜೆಪಿ ಸರ್ಕಾರದ ಹೇಳಿಕೆಗಳ ನಡುವೆಯೇ ವಿಶ್ವದ ಹಸಿವಿನ ಸೂಚ್ಯಂಕ ಪಟ್ಟಿಯನ್ನು ಗಮನಿಸಿದಾಗ ನೆರೆಹೊರೆಯ ರಾಷ್ಟ್ರಗಳಿಗಿಂತಲೂ ಕೆಳಗಿನ 112ನೇ ಸ್ಥಾನವನ್ನು ಭಾರತ ಹೊಂದಿದೆ. ಇಂತಹ ವಿಚಾರಗಳತ್ತ ಮೋದಿ ಸರಕಾರ ಕಾಳಜಿ ವಹಿಸಿಲ್ಲ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮೊದಲು ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ವಾಸ್ತವವಾಗಿ ವಾರ್ಷಿಕ 2 ಲಕ್ಷ ಉದ್ಯೋಗದ ಸೃಷ್ಟಿಯೂ ಆಗಿಲ್ಲ. ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಬದಲಾಗಿ ಗುತ್ತಿಗೆ, ಹೊರಗುತ್ತಿಗೆ ಉದ್ಯೋಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆಯೆಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರದ ಬಿಜೆಪಿ ಸರಕಾರ ಭ್ರಷ್ಟಾಚಾರಕ್ಕೆಂದೇ ‘ಚುನಾವಣಾ ಬಾಂಡ್’ ಎನ್ನುವ ಕಾಯ್ದೆಯನ್ನೆ ಜಾರಿಗೆ ತಂದಿತು ಎಂದು ವ್ಯಂಗ್ಯವಾಡಿದ ಭರತ್, ವಿದೇಶಗಳಲ್ಲಿ ರದ್ದುಗೊಂಡ ಔಷಧಿ ಸಂಸ್ಥೆಗಳಿಗೆ ಇಲ್ಲಿ ಅವಕಾಶ ನೀಡಿ ಅಂತಹ ಸಂಸ್ಥೆಗಳಿಂದಲೂ ಚುನಾವಣಾ ಬಾಂಡ್ ಮೂಲಕ ಹಣ ಪಡೆಯಲಾಗಿದೆ. ಪ್ರಧಾನಿ ಮೋದಿಯವರಿಂದ ಸ್ವಚ್ಛ ಆಡಳಿತ ಎನ್ನುತ್ತಲೆ ಚುನಾವಣಾ ಬಾಂಡ್‍ನ ಸರಿ ಸುಮಾರು 9200 ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಆರೋಪಿಸಿದರು.
ಬಿಜೆಪಿ ಆಡಳಿತದಲ್ಲಿ ಬಡವರ ಹಾಗೂ ಶ್ರೀಮಂತರ ಭಾರತವವನ್ನು ನೋಡುವಂತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಎಲ್ಲಾ ಕಾರಣಗಳಿಂದ ಸಿಐಟಿಯು ಸಂಘಟನೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಪ್ರಯತ್ನವಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದೆ. ಕಾರ್ಮಿಕರು, ರೈತ ಸಮೂಹ ಕೇಂದ್ರದ ಧೋರಣೆಗಳನ್ನು ಅರ್ಥೈಸಿಕೊಂಡು ಎಚ್ಚೆತ್ತುಕೊಳ್ಳುವ ಮೂಲಕ ಮತದಾನ ಮಾಡಬೇಕೆಂದು ತಿಳಿಸಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ, ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪ್ರತಾಪಸಿಂಹ ಅವರು ತಮ್ಮ ಅವಧಿಯಲ್ಲಿ ಕೊಡಗಿನ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಸಿಐಟಿಯು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲವನ್ನು ನೀಡುತ್ತಿರುವುದಾಗಿ ತಿಳಿಸಿದರು.
::: ಪ್ರಣಾಳಿಕೆ ಬಿಡುಗಡೆ :::
ಇದೇ ಸಂದರ್ಭ ಲೋಕಸಭಾ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಹೊರ ತಂದಿರುವ ಸಿಐಟಿಯುನ ‘ಕಾರ್ಮಿಕ ಪ್ರಣಾಳಿಕೆ’ಯನ್ನು ಸಂಘಟನೆಯ ಪ್ರಮುಖರು ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಖಜಾಂಚಿ ಎನ್.ಸಿ.ಕುಟ್ಟಪ್ಪನ್, ಸದಸ್ಯರಾದ ಕೆ.ಕೆ. ಹರಿದಾಸ್ ಹಾಗೂ ರಾಚಪ್ಪಾಜಿ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

*ವಿರಾಜಪೇಟೆ : ಗಣೇಶ ವಿಸರ್ಜನೆ ಶೋಭಾಯಾತ್ರೆ ಸಂದರ್ಭ ವಿದ್ಯುತ್ ಅವಘಡ : ಐವರಿಗೆ ಗಾಯ : ಇಬ್ಬರ ಸ್ಥಿತಿ ಗಂಭೀರ*

ಸೆಪ್ಟೆಂಬರ್ 26, 2026

*ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕೊಡಗಿನಲ್ಲಿ ಜನಜಾಗೃತಿ : 50 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನ ಜಾಥಾ*

ಸೆಪ್ಟೆಂಬರ್ 25, 2026

*ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ*

ಸೆಪ್ಟೆಂಬರ್ 25, 2026

*ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕೊಡಗಿನಲ್ಲಿ ಜನಜಾಗೃತಿ : 50 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನ ಜಾಥಾ*

ಸೆಪ್ಟೆಂಬರ್ 25, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಸೆ.25 NEWS DESK : ದೇಶದ ಅಖಂಡತೆ, ಏಕತೆ ಹಾಗೂ ಆಂತರಿಕ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ…

*ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ*

ಸೆಪ್ಟೆಂಬರ್ 25, 2026

*ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ : ಮಡಿಕೇರಿಯಲ್ಲಿ ಪ್ರತಿಭಟನೆ*

ಸೆಪ್ಟೆಂಬರ್ 25, 2026

*ಕಡಿಯತನಾಡ್‌ನ ಕುರಿತು ಬೃಹತ್ ಅಧ್ಯಯನ ಕೃತಿ ಬಿಡುಗಡೆ : ಮೊದಲ ಬಾರಿಗೆ ನಾಡಿನ ಸಮಗ್ರ ಅಧ್ಯಯನ : ಬೆಂಗಳೂರಿನಲ್ಲಿ ಸೆ.27 ರಂದು ಲೋಕಾರ್ಪಣೆ*

ಸೆಪ್ಟೆಂಬರ್ 25, 2026

*ಸೆ.27ರಂದು ಸ್ವಚ್ಛತಾ ಕಾರ್ಯಕ್ರಮ*

ಸೆಪ್ಟೆಂಬರ್ 25, 2026

*ಸುಂದರನಗರದಲ್ಲಿ ಬೀದಿ ನಾಯಿಗಳ ಹಾವಳಿ : ವೃದ್ಧರ ಮೇಲೆ ದಾಳಿ : ಕ್ರಮಕ್ಕೆ ಒತ್ತಾಯ*

ಸೆಪ್ಟೆಂಬರ್ 25, 2026

*ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಮಗ್ರ ಉಚಿತ ಆರೋಗ್ಯ ಶಿಬಿರ*

ಸೆಪ್ಟೆಂಬರ್ 25, 2026

*ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆ ಆರಂಭ*

ಸೆಪ್ಟೆಂಬರ್ 25, 2026

*ಮಡಿಕೇರಿ ನಗರ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ*

ಸೆಪ್ಟೆಂಬರ್ 25, 2026

*ವಿರಾಜಪೇಟೆ ಅರಣ್ಯ ಇಲಾಖೆಗೆ ನೂತನ ಬೊಲೆರೋ ವಾಹನ ಹಸ್ತಾಂತರ*

ಸೆಪ್ಟೆಂಬರ್ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.