
ಮಡಿಕೇರಿ ಏ.20 NEWS DESK : ಗೌಡ ಇವ್‍ನಿಂಗ್ ಸ್ಟಾರ್ಸ್ ವತಿಯಿಂದ ಅರೆಭಾಷೆ ಗೌಡ ಜನಾಂಗದ ಕ್ರಿಕೆಟ್ ಪಂದ್ಯಾವಳಿಯ 25ನೇ ವರ್ಷದ ಪ್ರಯುಕ್ತ ಮೇ14 ರಿಂದ 16ರವರೆಗೆ ಮರಗೋಡಿನ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ‘ಗೌಡ ಕ್ರಿಕೆಟ್ ಲೀಗ್’ ಟೆನ್ನಿಸ್ ಬಾಲ್ ಚುಟುಕು ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮರಗೋಡಿನ ಗೌಡ ಇವ್‍ನಿಂಗ್ ಸ್ಟಾರ್ ನ ಅಧ್ಯಕ್ಷರಾದ ರೋಶನ್ ಕಟ್ಟೆಮನೆ, ಸಮಾಜ ಬಾಂಧವರಲ್ಲಿ ಸೌಹಾರ್ದ ಬಾಂಧವ್ಯ ಬೆಸೆಯುವ ಚಿಂತನೆಯಡಿ ಆಯೋಜಿಸಲಾಗುತ್ತಿರುವ ಗೌಡ ಕ್ರಿಕೆಟ್ ಲೀಗ್‍ನಲ್ಲಿ 14 ಫ್ರಾಂಚೈಸಿ ತಂಡಗಳು ಪಾಲ್ಗೊಳ್ಳಲಿದ್ದು, ಮೊದಲು ನೋಂದಾವಣೆ ಮಾಡಿಕೊಂಡ 182 ಆಟಗಾರರಿಗೆ ಅವಕಾಶ ನೀಡಲಾಗುತ್ತದೆಂದರು.
ಪಂದ್ಯಾವಳಿ ವಿಜೇತ ತಂಡಕ್ಕೆ 55,555ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 33,333 ರೂ. ಮತ್ತು ಟ್ರೋಫಿ, ದ್ವಿತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೂ ಬಹುಮಾನಗಳನ್ನು ನೀಡುವುದಲ್ಲದೆ, ವೈಯಕ್ತಿಯ ಬಹುಮಾನಗಳು ಇರುವುದಾಗಿ ಮಾಹಿತಿ ನೀಡಿದರು.
ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ಆಟಗಾರರು ಏ.28ರ ಒಳಗಾಗಿ ತಮ್ಮ ಹೆಸರನ್ನು ವಿವೇಕ್ ಕರ್ಣಯ್ಯನ ಮೊ.9902497817, ಮಿಲನ್ ಕಾಂಗೀರ ಮೊ.9008538932, ತರುಣ್ ಮುಕ್ಕಾಟಿ ಮೊ. 8217614807ನ್ನು ಸಂಪರ್ಕಿಸಬಹುದು. ಪಂದ್ಯಾವಳಿಯ ಬಗ್ಗೆ ಮಾಹಿತಿಗಾಗಿ ರೋಶನ್ ಕಟ್ಟೆಮನೆ ಮೊ.9449361933, ಸರ್ವಿನ್ ಬೈಮನ ಮೊ.7338323571, ಸತ್ಯ ಪರ್ಲಕೋಟಿ ಮೊ. 9449476139 ನ್ನು ಸಂಪರ್ಕಿಸಬಹುದೆಂದರು.
ಸುದ್ದಿಗೋಷ್ಠಿಯಲ್ಲಿ ಗೌಡ ಇವ್‍ನಿಂಗ್ ಸ್ಟಾರ್‌ನ ಉಪಾಧ್ಯಕ್ಷ ಸತ್ಯ ಪರ್ಲಕೋಟಿ, ಕಾರ್ಯದರ್ಶಿ ವಿವೇಕ್ ಕರ್ಣಯ್ಯನ, ಸಹ ಕಾರ್ಯದರ್ಶಿ ಮಿಲನ್ ಕಾಂಗೀರ, ಖಜಾಂಚಿ ಸರ್ವಿನ್ ಬೈಮನ ಉಪಸ್ಥಿತರಿದ್ದರು.








