
ಮಡಿಕೇರಿ ಏ.25 NEWS DESK : ಲೋಕಸಭಾ ಚುನಾವಣೆ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಏ.26 ರಂದು ಮತದಾನ ನಡೆಯಲಿದ್ದು, ನಗರದ ಸಂತ ಜೋಸೆಫರ ಶಾಲೆ, ವಿರಾಜಪೇಟೆ ಸಂತ ಅನ್ನಮ್ಮ ಶಾಲಾ ಆವರಣದಲ್ಲಿ ಮಸ್ಟರಿಂಗ್ ಕಾರ್ಯ ಸುಸೂತ್ರವಾಗಿ ನಡೆಯಿತು.
ಚುನಾವಣೆ ಮತಗಟ್ಟೆಗಳಿಗೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿಗಳು ಮತಯಂತ್ರ ಹಾಗೂ ಇತರೆ ಸಲಕರಣೆಗಳನ್ನು ಪಡೆದು ಮತಗಟ್ಟೆ ಕಡೆದ ಸಾಗಿದರು.
ಚುನಾವಣಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಆಯಾ ತಾಲೂಕು ಮಾಸ್ಟರಿಂಗ್ ಕೇಂದ್ರಗಳಲ್ಲಿ ಮತಯಂತ್ರ ಬಳಕೆ ಕುರಿತು ಕೊನೆಯ ಸುತ್ತಿನ ಮಾಹಿತಿ ಪಡೆದರು ಪಡೆದುಕೊಂಡರು.








