
ಮಡಿಕೇರಿ ಏ.26 NEWS DESK : ಕೊಡಗಿನ ವಿವಿಧೆಡೆ ಹಿರಿಯ ನಾಗರಿಕರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಯುವ ಮತದಾರರಿಗೆ ಸ್ಫೂರ್ತಿಯಾದರು.
ನಾಪೋಕ್ಲು ಬೂತ್ ಸಂಖ್ಯೆ 56 ರಲ್ಲಿ ಬೊಪ್ಪೇರ ಕಾವೇರಪ್ಪ (98) ಮತದಾನ ಮಾಡಿದರು.
ಚೌಡ್ಲೂ ಗ್ರಾಮದ ಹೊನ್ನಮ್ಮ (85) ಸಹಾಯಕರೊಂದಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತ ಗಟ್ಟೆಯಲ್ಲಿ ಮತ ಚಲಾಯಿಸಿದರು.








