
ಮಡಿಕೇರಿ ಏ.29 NEWS DESK : ಕೆ ಎಂ ಜೆ , ಎಸ್ ವೈ ಎಸ್ , ಎಸ್ ಎಸ್ ಎಫ್ ಸಂಘಟನೆಯ ವತಿಯಿಂದ 45 ಮಕ್ಕಳಿಗೆ ಉಚಿತವಾಗಿ ಸುನ್ನತ್ ಕಾರ್ಯಕ್ರಮ ನಡೆಸಲಾಯಿತು.
ಪಾಲಿಬೆಟ್ಟ ಜುಮಾ ಮಸ್ಜಿದ್ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಪಾಲಿಬೆಟ್ಟ ಎಸ್ ಎಸ್ ಎಫ್ ವಲಯ ಅಧ್ಯಕ್ಷ ಶಿಹಾಬುದ್ದೀನ್ ಅಹ್ಸನಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದಲೂ ಸುನ್ನತ್ ಕಾರ್ಯಕ್ರಮ ವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಸಮುದಾಯ ಬಾಂಧವರು
ಇದರ ಸದುಪಯೋಗ ಪಡಿಸಿಕೊಂಡು ಧಾರ್ಮಿಕ ಚಿಂತನೆಯನ್ನು ಮೈಗೂಡಿಸಿಕೊಂಡ ಮುನ್ನಡೆಯಬೇಕೆಂದರು.
ಸುನ್ನತ್ ಕರ್ಮದಲ್ಲಿ ಕೊಡಗಿನ ನಾನ ಭಾಗಗಳಿಂದ ಬಂದಿದ್ದ ಎಲ್ಲ ಮಕ್ಕಳಿಗೆ ಪಾಲಿಬೆಟ್ಟ ಎಸ್ ಎಸ್ ಎಫ್ ಸಂಘಟನೆ ವತಿಯಿಂದ ಔಷದಿ ಹಾಗೂ ಸಿಹಿಯನ್ನು ಹಂಚಲಾಯಿತು.
ಕಾರ್ಯಕ್ರಮದಲ್ಲಿ ಮುಸ್ತಫ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಪಾಲಿಬೆಟ್ಟ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಸಮೀರ್ ಮುನ್ನ ಎಸ್ ವೈ ಎಸ್ ಅಧ್ಯಕ್ಷ ಬಶೀರ್, ಮಸೀದಿ ಆಡಳಿತ ಮಂಡಳಿಯ ಪ್ರಮುಖರು ಹಾಗೂ ಎಸ್ ಎಸ್ ಎಪ್ ಮತ್ತು ಎಸ್ ವೈ ಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

































