ಮಡಿಕೇರಿ ಏ.30 NEWS DESK : ಯು.ಎ.ಇ. ಯ ದುಬೈನಲ್ಲಿ ಜರುಗಿದ ಅಂಡರ್-20 ಜೂನಿಯರ್ ಏಷ್ಯನ್ ಚಾಂಪಿಯನ್ಶಿಪ್-2024ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ 100 ಮೀ. ಹರ್ಡಲ್ಸ್ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
13.66 ಸೆಕೆಂಡ್ನಲ್ಲಿ ಉನ್ನತಿ ಗುರಿ ಸಾಧಿಸಿ ಸಾಧನೆ ತೋರಿದ್ದು, ಪದಕ ಪಡೆದುಕೊಂಡಿದ್ದಾರೆ.
ವಿಶೇಷವೆಂದರೆ ಇಡೀ ಕುಟುಂಬದ ಕ್ರೀಡಾ ಸಾಧನೆ ಗಮನಾರ್ಹವಾಗಿದೆ. ಉನ್ನತಿ ಅವರ ತಂದೆ ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಅವರು 1994ರ ಜೂನಿಯರ್ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ4*400 ಮೀಟರ್ ರಿಲೇಯಲ್ಲಿ ಬೆಳ್ಳಿಪದಕ ಪಡೆದಿದ್ದಾರೆ. ತಾಯಿ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ 1996ರಲ್ಲಿ ಹೆಫ್ಟಥ್ಲಾನ್ನಲ್ಲಿ ಭಾರತಕ್ಕೆ ಕಂಚಿನ ಪದಕ ಗಳಿಸಿದ ಸಾಧನೆ ಮಾಡಿದ್ದರು.
ಇದೀಗ ಪುತ್ರಿ ಉನ್ನತಿ ಅಯ್ಯಪ್ಪ ಕೂಡ ಇದೇ ಜೂನಿಯರ್ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ 100 ಮೀಟರ್ ಹರ್ಡಲ್ಸ್ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಪೋಷಕರೊಂದಿಗೆ ಇದೀಗ ಪುತ್ರಿಯೂ ಭಾರತಕಕೆ ಪದಕ ತಂದ ಕೀರ್ತಿ ಈ ಕುಟುಂಬದ್ದಾಗಿದೆ.