ಕೂಡಿಗೆ ಮೇ 13 NEWS DESK : ಕೂಡಿಗೆ, ಕೊಪ್ಪಲು, ಹೆಗ್ಗಡಳ್ಳಿ, ಕೋಟೆ ಗ್ರಾಮ ದೇವತೆ ಶ್ರೀ ದಂಡಿನಮ್ಮ, ಶ್ರೀ ಬಸವೇಶ್ವರ ಹಾಗೂ ಶ್ರೀ ಮುತ್ತತ್ ರಾಯ ದೇವಾಲಯದ ಜಾತ್ರ ಮಹೋತ್ಸವವು ಮೇ 20 ರಿಂದ ಆರಂಭವಾಗಲಿದೆ.
ಮೇ 20 ರಂದು ಸಂಜೆ 6 ಗಂಟೆಗೆ ಶ್ರೀ ಬಸವೇಶ್ವರ ದೇವರ ವಾನ್ಯ ಹಾಗೂ ಮೆರವಣಿಗೆ ನಡೆಯಲಿದೆ. ಮೇ 24 ರಂದು ಬೆಳಿಗ್ಗೆ 9 ಗಂಟೆಯಿಂದ ಶ್ರೀ ದಂಡಿನಮ್ಮ ದೇವಿಯ ವಾರ್ಷಿಕ ಪೂಜಾ ಮಹೋತ್ಸವದ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ.
ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ಸಂಜೆ 8 ಗಂಟೆಯಿಂದ ಅಗ್ನಿ ಸ್ಥಾಪನೆ ನೆರವೇರಲಿದೆ. ನಂತರ ಶ್ರೀ ಬಸವೇಶ್ವರ ದೇವಸ್ಥಾನದಿಂದ ಗ್ರಾಮಸ್ಥರುಗಳು ಹಾಗೂ ಭಕ್ತಾದಿಗಳು ಕಾವೇರಿ ನದಿಗೆ ತೆರಳಿ ಕಳಸ ಪೂಜೆ ನಡೆಯಲಿದೆ. ಬಳಿಕ ಹಣ್ಣೆಡಗೆ ಉತ್ಸವ ಮತ್ತು ಕೊಂಡೋತ್ಸವ ನಡೆಯಲಿದ್ದು, ಮರುದಿನ ಮುಂಜಾನೆ ದೇವಾಲಯದ ಮುಂಭಾಗ ಉಯ್ಯಾಲೋತ್ಸವ ಜರುಗಲಿದೆ.
ಹನ್ನೆಡೆಗೆ ಹಾಗೂ ಕಳಸ ಹೊತ್ತ ಮಹಿಳೆಯರು ಹಾಗೂ ಪುರುಷರು ರಾತ್ರಿ 9 ಯಿಂದ ಕಾವೇರಿ ನದಿಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಮುಂಜಾನೆಯ ತನಕ ಮೆರವಣಿಗೆಯಲ್ಲಿ ಪಾಲ್ಗೊಂಡು ಕೊಂಡೋತ್ಸವ ಹಾಗೂ ಉಯ್ಯಾಲೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೇ 25 ರಂದು ಬೆಳಿಗ್ಗೆ 9 ಗಂಟೆಯಿಂದ ದಂಡಿನಮ್ಮ ಹಾಗೂ ಬಸವೇಶ್ವರ ದೇವಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ ಎಂಟು ಗಂಟೆಯಿಂದ ಕೂಡಿಗೆ, ಕೊಪ್ಪಲು, ಹೆಗ್ಗಡಹಳ್ಳಿ, ಕೋಟೆ ವ್ಯಾಪ್ತಿಯಲ್ಲಿ ಹರಿಸೇವಾ ಕಾರ್ಯಕ್ರಮ ನಡೆಯಲಿದೆ.
ಮೇ 26 ರಂದು ಬೆಳಿಗ್ಗೆ 6 ಗಂಟೆಗೆ ಮುತ್ತಾತುರಾಯ ದೇವರಿಗೆ ಬಲಿ ಪೂಜೆ, ವಾಸ್ತು ಪೂಜೆ ಮತ್ತು ಮಧ್ಯಾಹ್ನ 12 ಗಂಟೆಯಿಂದ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ದಂಡಿನಮ್ಮ ಹಾಗೂ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಕೆ.ಸೋಮಶೇಖರ್ ಮಂಜು, ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಕೆ.ಎನ್.ಮಂಜುನಾಥ್ ಹಾಗೂ ಕಾರ್ಯಕಾರಿ ಮಂಡಳಿ, ಶ್ರೀ ದಂಡಿ ನಮ್ಮ ಶ್ರೀ ಬಸವೇಶ್ವರ ಹಾಗೂ ಮುತ್ತತ್ತು ರಾಯ ದೇವಸ್ಥಾನ ಹಾಗೂ ಗ್ರಾಮಗಳ ಸೇವಾ ಸಮಿತಿ ಮನವಿ ಮಾಡಿದೆ.
ವರದಿ : ಕೆ.ಆರ್.ಗಣೇಶ್ -ಕೂಡಿಗೆ