ಮಡಿಕೇರಿ ಮೇ 23 NEWS DESK : ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್.ಜೆ.ಎಂ ಪಾಲಿಬೆಟ್ಟ ರೇಂಜ್ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ರೇಂಜ್‍ನ ಕೇಂದ್ರ ಮದ್ರಸ ಪಾಲಿಬೆಟ್ಟ ಮುಹಿಮಾತುದ್ದೀನ್ ಮದ್ರಸ ವಠಾರದಲ್ಲಿ ನಡೆದ ಕಾರ್ಯಕ್ರಮವನ್ನು ಪಾಲಿಬೆಟ್ಟ ಮುಹ್ಯುದ್ದೀನ್ ಜುಮಾ ಮಸ್ಟಿದ್ ಖತೀಬ್ ಝುಬೈರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ರೇಂಜ್ ಅಧ್ಯಕ್ಷ ಮುಸ್ತಫ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.
ಪಾಲಿಬೆಟ್ಟ ಮುಹ್ಯುದ್ದೀನ್ ಜುಮಾ ಮಸೀದ್ ಖತೀಬ್ ಆಡಳಿತ ಮಂಡಳಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಪ್ರಧಾನ ಕಾರ್ಯದರ್ಶಿ ಶಮೀರ್ ಮುನ್ನಾ, ಸದಸ್ಯ ಫಝಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಎಸ್.ಜೆ.ಎಂ ಕೇಂದ್ರ ಸಮಿತಿ ಆಯೋಜಿಸಿದ ಸ್ಮಾರ್ಟ್ ಸ್ಕಾಲರ್‍ಶಿಪ್ ಪರೀಕ್ಷೆಯ ಕೊಡಗು ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಗಳಾದ ಪಾಲಿಬೆಟ್ಟ ಮುಹಿಮಾತುದ್ದೀನ್ ಮದ್ರಸ ವಿದ್ಯಾರ್ಥಿ ಆದಿಲ್ ಮತ್ತು ಮಟ್ಟಂ ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿ ಆಶಿಖ್ ಅವರನ್ನು ಸನ್ಮಾನಿಸಲಾಯಿತು.
ರೇಂಜ್ ಸಮಿತಿಯ ಒಂದು ವರ್ಷದ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಸಬಾಹ್ ಸಖಾಫಿ ಅಲ್ ಹಿಮಮಿ ವಾಚಿಸಿದರು. ಫಿನಾನ್ ಕಾರ್ಯದರ್ಶಿ ಅಬೂಬಕರ್ ಮದನಿ ಲೆಕ್ಕಪತ್ರ ಮಂಡಿಸಿದರು.
ನೂತನ ಸಮಿತಿ ರಚನೆ :: ಸಭೆಯಲ್ಲಿ 2024-25 ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ನೌಶಾದ್ ಝಹ್ರಿ (ಅಧ್ಯಕ್ಷರು), ಸಬಾಹ್ ಸಖಾಫಿ ಅಲ್ ಹಿಮಮಿ (ಪ್ರಧಾನ ಕಾರ್ಯದರ್ಶಿ), ಅಬೂಬಕರ್ ಮದನಿ (ಫಿನಾನ್ಸ್ ಕಾರ್ಯದರ್ಶಿ) ಹನೀಫ್ ಹಿಮಮಿ, ಶಂಸುದ್ದೀನ್ ಸಅದಿ, ತಬ್ಬಿರ್ ಫಾಳಿಲಿ (ಉಪಾಧ್ಯಕ್ಷರು) ಝುಬೈರ್ ಸಅದಿ, ರಝಾಖ್ ಸಅದಿ, ರಫೀಖ್ ಸಅದಿ (ಕಾರ್ಯದರ್ಶಿಗಳು) ಅಝೀಝ್ ಮುಸ್ಲಿಯಾರ್, ಬಾದುಷ ಸಖಾಫಿ (ಕನ್ವಿನರ್ ಗಳು) ಪ್ರಧಾನ ಕಾರ್ಯದರ್ಶಿ ಸಬಾಹ್ ಸಖಾಫಿ ಅಲ್ ಹಿಮಮಿ ಮತ್ತಿತರರಿದ್ದರು.
ಮುಅಲ್ಲಿಮರ ಸರ್ವತೋಮುಖ ಬೆಳವಣಿಗೆಗಾಗಿ ರಾಷ್ಟ್ರದಾದ್ಯಂತ ಕಾರ್ಯಾಚರಿಸುತ್ತಿರುವ ಸಂಘಟನೆಯಾಗಿದೆ ಎಸ್.ಜೆ.ಎಂ. ಇದರ ಕೊಡಗು ಜಿಲ್ಲೆಯ ಪಾಲಿಬೆಟ್ಟ ರೇಂಜ್ ಅಧೀನಧಲ್ಲಿ 15 ಮದ್ರಸಗಳು ಕಾರ್ಯಾಚರಿಸುತ್ತಿದ್ದು 44 ಮುಅಲ್ಲಿಂಗಳು ಸದಸ್ಯರಾಗಿದ್ದಾರೆ.