ಮಡಿಕೇರಿ ಮೇ.23 NEWS DESK : ಪ್ರಸಕ್ತ(2024-25) ಸಾಲಿಗೆ ಕೊಡ್ಲಿಪೇಟೆ ಕ್ಯಾತೆ ಗ್ರಾಮದ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ 2024-25ನೇ ಸಾಲಿಗೆ ಗಣಿತ ಉಪನ್ಯಾಸಕರು(1), ರಸಾಯನಶಾಸ್ತ್ರ ಉಪನ್ಯಾಸಕರು(1), ಜೀವಶಾಸ್ತ್ರ, ಭೌತಶಾಸ್ತ್ರ, ಕನ್ನಡ, ಆಂಗ್ಲ ಭಾಷೆ ಉಪನ್ಯಾಸಕರು( ತಲಾ 1), ಕನ್ನಡ ಶಿಕ್ಷಕರು(1), ಆಂಗ್ಲ ಭಾಷೆ ಶಿಕ್ಷಕರು(1), ಸಮಾಜ ವಿಜ್ಞಾನ ಶಿಕ್ಷಕರು(1), ವಿಜ್ಞಾನ ಶಿಕ್ಷಕರು(1), ಗಣಕಯಂತ್ರ ಶಿಕ್ಷಕರು(1), ಸ್ಟಾಪ್ ನರ್ಸ್ ಶಿಕ್ಷಕರು(1) ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು(1) ಹಾಗೂ ವಿರಾಜಪೇಟೆಯ ಪೆರುಂಬಾಡಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗಣಕಯಂತ್ರ ಶಿಕ್ಷಕರು(01) ಮತ್ತು ಸ್ಟಾಪ್ ನರ್ಸ್ ಶಿಕ್ಷಕರು(1) ವಿಷಯಗಳಿಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ 30 ಕೊನೆಯ ದಿನವಾಗಿದೆ. ಅರ್ಹ ಅಭ್ಯರ್ಥಿಗಳು ಕಡೆಯ ದಿನಾಂಕದೊಳಗೆ ಜಿಲ್ಲಾ ಕಚೇರಿಗೆ ಅಥವಾ ಸಂಬಂಧಪಟ್ಟ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದು. ಉಪನ್ಯಾಸಕರ ಮತ್ತು ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆ ಎಂಎಸ್ಸಿ ಮತ್ತು ಬಿ.ಎಡ್ ಆಗಿರಬೇಕು. ಗಣಕಯಂತ್ರ ಶಿಕ್ಷಕರಿಗೆ ಬಿಸಿಎ ಆಗಿರಬೇಕು. ಸ್ಟಾಪ್ ನರ್ಸ್‍ಗೆ ಜಿಎನ್‍ಎಂ ಆಗಿರಬೇಕು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಬಿಪಿಎಡ್ ಆಗಿರಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಎಫ್‍ಎಂಸಿ ಕಾಲೇಜು ಹತ್ತಿರ, ಮಡಿಕೇರಿ ದೂ.ಸಂ. 08272-225528, ಪ್ರಾಂಶುಪಾಲರು, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ, ಕ್ಯಾತೆ ಗ್ರಾಮ ಕೊಡ್ಲಿಪೇಟೆ ದೂ.ಸಂ. 7676473767 ಹಾಗೂ ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪೆರುಂಬಾಡಿ, ವಿರಾಜಪೇಟೆ ದೂ.ಸಂ.9741209826 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಂ.ದಿವಾಕರ ತಿಳಿಸಿದ್ದಾರೆ.