ಮಡಿಕೇರಿ ಮೇ 23 NEWS DESK : ಶ್ರೀ ಮುತ್ತಪ್ಪ ಮಹಿಳಾ ವೇದಿಕೆ ವತಿಯಿಂದ ನಗರದ ಶ್ರೀ ಮುತ್ತಪ್ಪ ದೇವಾಲಯದಲ್ಲಿರುವ ಭಗವತಿ ದೇವಿಯ ವಾರ್ಷಿಕ ಪೊಂಗಾಲ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಕೊಡಗಿನ ಪುರಾತನ ದೇವಾಲಯಗಳಲ್ಲೊಂದಾದ ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಪಾರ್ವತಿ, ಸರಸ್ವತಿ, ಮಹಾಲಕ್ಷ್ಮಿ ಸಂಕಲ್ಪದಲ್ಲಿರುವ ಶ್ರೀ ಭಗವತಿ ದೇವಿಗೆ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ನಂತರ ದೇವಾಲಯದ ಆವರಣದಲ್ಲಿ ನೂರಾರು ಮಹಿಳೆಯರು ಏಕಕಾಲದಲ್ಲಿ ಸೌದೆ ಸೌದೆ ಒಲೆಯನ್ನು ಬಳಸಿ ಮಣ್ಣಿನ ಮಡಕೆಯಲ್ಲಿ ಸಿಹಿ ಪೊಂಗಲ್ ತಯಾರಿಸಿ ದೇವರಿಗೆ ಅರ್ಪಿಸಿದರು.
ಇದು ಕೇವಲ ಮಹಿಳೆಯರು ಮಾತ್ರ ನಡೆಸುವ ಪುಣ್ಯ ಕಾರ್ಯವಾಗಿದ್ದು, ಪೊಂಗಾಲ ಸಮರ್ಪಣೆಯಿಂದ ಮನೆಯಲ್ಲಿ ಆರೋಗ್ಯ ಶಾಂತಿ, ನೆಮ್ಮದಿ ನೆಲೆಸುವ ನಂಬಿಕೆ ಇದೆ ಎಂದು ಶ್ರೀ ಮುತ್ತಪ್ಪ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದ ರಾಮನ್ ಮಾಹಿತಿ ನೀಡಿದರು.