ವಿರಾಜಪೇಟೆ ಮೇ 27 NEWS DESK : ಆರ್ಜಿ ಗ್ರಾಮದ ಕಲ್ಲುಬಾಣೆ ಬದ್ರಿಯಾ ಶಾಲಾ ಮೈದಾನದಲ್ಲಿ ಮೊದಲ ವರ್ಷದ ವಿಲೇಜ್ ಲೆವೆಲ್ ಸೂಪರ್ ನೈನ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ಕಲ್ಲು ಕಪ್ ತಂಡದ ವತಿಯಿಂದ ನೂರುದ್ದೀನ್, ಹರ್ಷದ್, ಫಂಸಿರ್ ಹಾಗೂ ರಾಶಿ ಅವರ ಆಯೋಜಕತ್ವದಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಕೊಡಗಿನ ಹಲವಾರು ಭಾಗಗಳಿಂದ ಒಟ್ಟು 30 ತಂಡಗಳು ಭಾಗವಹಿಸಿದ್ದವು.
ಫೈನಲ್ ಪಂದ್ಯದಲ್ಲಿ ಚಂಕ್ಸ್ ವಿರಾಜಪೇಟೆ ತಂಡವು 3 ವಿಕೆಟ್ ನಷ್ಟದಲ್ಲಿ 5 ಓವರ್ ಗಳಿಗೆ 66 ರನ್ ಗಳನ್ನು ಬಾರಿಸಿ ಫ್ರೆಂಡ್ಸ್ ವಿರಾಜಪೇಟೆ ತಂಡವನ್ನು ಆಲ್ ಔಟ್ ಮಾಡುವುದರ ಮೂಲಕ ಚಂಕ್ಸ್ ವಿರಾಜಪೇಟೆ ತಂಡವು 45 ರನ್ಗಳ ಭರ್ಜರಿ ಗೆಲುವನ್ನು ಸಾಧಿಸಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿತು.
ಪಂದ್ಯಾವಳಿಯ ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಶಾರುಖ್, ಮ್ಯಾನ್ ಆಫ್ ದಿ ಸಿರೀಸ್ ಇಚಾವೋ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ರಜಾಕ್, ಬೆಸ್ಟ್ ಬೌಲರ್ ಅಜಯ್, ಬೆಸ್ಟ್ ಕ್ಯಾಚ್ ಸಕ್ಲೇನ್, ಉತ್ತಮ ಕಾಮೆಂಟರಿ ಟ್ರೋಫಿಯನ್ನು ಉಣ್ಣಿ ಪೆರುಂಬಾಡಿ ಅವರು ಪಡೆದುಕೊಂಡರು
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅಕ್ರಮ ಸಕ್ರಮ ಸಮಿತಿಯ ತಾಲೂಕು ಅಧ್ಯಕ್ಷ ಆರ್.ಕೆ.ಸಲಾಂ, ಕಲ್ಲುಬಾಣೆ ಗ್ರಾ.ಪಂ ಅಧ್ಯಕ್ಷೆ ರಜಿ ಫಾತಿಮಾ, ವಿರಾಜಪೇಟೆ ಪುರಸಭೆ ಸದಸ್ಯರಾದ ರಾಫಿ, ಕಾಂಗ್ರೆಸ್ ಮುಖಂಡರಾದ ಚೇಕು, ಅನಿಲ್ ಕುಮಾರ್ ಅಮ್ಮತ್ತಿ, ವಿನಾಯಕ ಮೋಟರ್ಸ್ ಮಾಲಿಕ ಹೇಮಂತ್, ಶಫೀಕ್, ಕೆವೈ ಎ ಅಧ್ಯಕ್ಷರು ನೌಫಲ್, ಮತ್ತು ಹಲವಾರು ಗಣ್ಯರು ಹಾಜರಿದ್ದರು.