ಸುಂಟಿಕೊಪ್ಪ, NEWS DESK ಆ.22: ಮಕ್ಕಳು ನಿಮ್ಮ ಹಿರಿಯರನ್ನು ಗೌರವಿಸುವ ಸದ್ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ನೀವು ಹಿರಿಯರಾದಾಗ ನಿಮ್ಮ ಮಕ್ಕಳಿಂದ ನಿರೀಕ್ಷಿಸಲು ಸಾಧ್ಯವೆಂದು ರೋಟರಿ ಸಂಸ್ಥೆಯ ಎ.ಲೋಕೇಶ್ ಕುಮಾರ್ ಹೇಳಿದರು
ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ “ಹಿರಿಯ ಜೀವಿಗಳಿಗೆ ನಮನ” ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೋ. ಎ.ಲೋಕೇಶ್ ಕುಮಾರ್ ಮಾತನಾಡಿ ಹಿರಿಯರನ್ನೂ ಗೌರವಿಸುವುದು ನೈಸರ್ಗಿಕ ಧರ್ಮ. ಆದರೆ ಹಿರಿಯರನ್ನು ಗೌರವಿಸುವ ಮನೋಬಾವನ್ನು ಬೆಳೆಸಿಕೊಂಡಾಗ ಸಮಾಜದಲ್ಲಿ ತÀಮ್ಮ ವ್ಯಕ್ತಿತ್ವವನ್ನು ಗುರುತಿಸಲು ಸಹಾಯವಾಗುವುದು ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಿರುತ್ತೀರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಂಟಿಕೊಪ್ಪದ ಹಿರಿಯ ವರ್ತಕರು ಕ್ರೀಡಾಪಟು ಕೆ.ಪಿ.ಜಗನ್ನಾಥ್, ಸಮಾಜ ಸೇವಕ ಬಿ.ಎಸ್. ಈರಪ್ಪ ಹಾಗೂ ಬಿ.ಎಸ್.ಎಸ್.ಎಲ್ ಸಂಸ್ಥೆಯ ನಿವೃತ್ತ ಉದ್ಯೋಗಿ ರಶೀದ್ ಖಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಶೀದ್ ಖಾನ್ ಮಾತನಾಡಿ ನಾವು ಎಷ್ಟೇ ಉನ್ನತರಾಗಿ ಸಮಾಜದಲ್ಲಿ ಗುರುತಿಸಿಕೊಂಡರು ಪೋಷಕರು ಮತ್ತು ಹಿರಿಯರು ಕೊಡಿಸಿದ ಸಂಸ್ಕೃತಿ ಹಾಗೂ ವಿದ್ಯಾಭ್ಯಾಸದಿಂದ ಮಾತ್ರ ತಂದೆ ತಾಯಿ ಯಾವಾಗಲೂ ಮಕ್ಕಳ ಸುರಕ್ಷತೆ ಬಗ್ಗೇನೆ ಚಿಂತಿತರಾಗಿರುತ್ತಾರೆ. ನಮ್ಮ ಏಳಿಗೆಯನ್ನೂ ಮಾತ್ರ ಬಯಸುತ್ತಾರೆ. ಹೀಗಿರುವಾಗ ಅಂತ ಹಿರಿಯರನ್ನು ವೃದ್ಧಾಶ್ರಮಗಳಿಗೆ ಕಳುಹಿಸಿ ದೇಶ ವಿದೇಶದಲ್ಲಿ ಅದೆಷ್ಟೋ ಮಕ್ಕಳನ್ನು ಇಂದಿನ ಸಮಾಜದಲ್ಲಿ ಕಾಣುತ್ತಿರುವುದು ವಿಷಾದನೀಯ ಸಂಗತಿ. ಇಂತಹ ದುಸ್ಥಿತಿಗೆ ಯಾರು ಕಾರಣಾಗಬೇಡಿ ಹಿರಿಯರನ್ನು ಗೌರವಿಸಿ, ಪ್ರೀತಿಸಿ ಸಹೋದರ ಸಹೋದರಿಯರೊಂದಿಗೆ ಅನ್ನೋನ್ಯತೆಯಿಂದ ಸಂಕಷ್ಟದಲ್ಲಿ ನೆರವಾಗಿ ಬಾಳುವಂತರಾಗಬೇಕು ಎಂದು ತಮ್ಮ ಬಾಲ್ಯಕಾಲದ ಕಷ್ಟ ಕಾರ್ಪಣ್ಯಗಳನ್ನು ಬಡತನದ ಕಾಲದಲ್ಲಿ ತಂದೆತಾಯಿಗಳು ಮಕ್ಕಳ ಮತ್ತು ಮನೆಯ ಸುರಕ್ಷಿತ ಜವಬ್ದಾರಿಯನ್ನು ನಿಭಾಯಿಸಿದ ದಿನಗಳ ಅನುಭವಗಳನ್ನು ವಿನಿಮಯ ಮಾಡಿಕೊಂಡರು.
ಸಮಾರAಭದಲ್ಲಿ ಶಾಲಾ ವಿದ್ಯಾರ್ಥಿಗಳಾದ ಎ.ಎಸ್ ಹಾರ್ದಿಕ್, ರಿಫ, ನಪ್ಯ ಖಾನಂ ಹಿರಿಯ ನಾಗರಿಕರ ದಿನಾಚರಣೆಯ ಮಹತ್ವದ ಮತ್ತು ಕಿರಿಯರು ಹಿರಿಯರನ್ನು ಗೌರವಿಸಿ, ಪ್ರೀತಿಸಿ ಹಾಗೂ ಹಿರಿಯ ಜೀವಿಗಳ ಬಗ್ಗೆ ಕಾಳಜಿಯನ್ನು ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಗೌರವಾಧ್ಯಕ್ಷ ರಫೀಕ್ ಖಾನ್, ಎಸ್ ಡಿ ಎಂ ಸಿ ಅಧ್ಯಕ್ಷೆ ಸಂಧ್ಯಾ ಹಾಗೂ ಮುಖ್ಯೋಪಾಧ್ಯಾಯ ಕುಮಾರ್ ಮಾತನಾಡಿದರು.

ವೇದಿಕೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಾದ ಓ.ಪಿ. ದಿನೇಶ್, ಲಿಂಗರಾಜು, ಜಯಂತ್ ಮಾಜಾರಿ ಹಾಗೂ ಹಿರಿಯ ನಾಗರಿಕ ಹೆಚ್.ಉಸ್ಮಾನ್ ಹಾಗೂ ಸಭೆಯಲ್ಲಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರಾದ ಕೆ.ಎಂ.ಆಲಿಕುಟ್ಟಿ, ಶಬೀರ್ ಮತ್ತು ಪೋಷಕರು ಪಾಲ್ಗೊಂಡಿದ್ದರು.
ಚಿತ್ರ.1: “ಹಿರಿಯ ಜೀವಿಗಳಿಗೆ ನಮನ” ಸುಂಟಿಕೊಪ್ಪದ ಹಿರಿಯ ವರ್ತಕರು ಕ್ರೀಡಾಪಟು ಕೆ.ಪಿ.ಜಗನ್ನಾಥ್, ಸಮಾಜ ಸೇವಕ ಬಿ.ಎಸ್. ಈರಪ್ಪ ಹಾಗೂ ಬಿ.ಎಸ್.ಎಸ್.ಎಲ್ ಸಂಸ್ಥೆಯ ನಿವೃತ್ತ ಉದ್ಯೋಗಿ ರಶೀದ್ ಖಾನ್ ಅವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು.







