ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಡೆಯ ಪಟ್ಟಿ ಸಿದ್ಧವಾಗಿದ್ದು
ದುಬಾರೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಕಾವೇರಿ ಸೇರಿದಂತೆ ವಿವಿಧ ಶಿಬಿರಗಳಿಂದ ಒಟ್ಟು 12 ಆನೆಗಳ ಪಟ್ಟಿ ಸಿದ್ಧಗೊಂಡಿದೆ.
ದಸರೆಗೆ ಕಳುಹಿಸಲು ಸಿದ್ಧವಾದ ಆನೆಗಳ ಪಟ್ಟಿಯಲ್ಲಿ ಕುಶಾಲನಗರ ಸಮೀಪದ ದೊಡ್ಡ ಹರವೆ ಶಿಬಿರದ ರೂಪ, ನಾಗರಹೊಳೆ ಸಮೀಪದ ಬಳ್ಳೆ ಆನೆ ಶಿಬಿರದ ಮಹೇಂದ್ರ, ಲಕ್ಷ್ಮಿ ಮತ್ತಿಗೋಡು ಶಿಬಿರದ ಏಕಲವ್ಯ, ಶ್ರೀಕಂಠ ಮತ್ತು ರಾಮಪುರ ಶಿಬಿರದ ಚೈತ್ರ ಆನೆಗಳನ್ನು ದಸರೆಗೆ ಕಳುಹಿಸಲು ನಿರ್ಧರಿಸಲಾಗಿದೆ.
ಕಳೆದ ಬಾರಿ 14 ಆನೆಗಳನ್ನು ದಸರಾ ಉತ್ಸವದಲ್ಲಿ ಪಾಲ್ಗೊಂಡಿತ್ತು.

ಪ್ರಥಮ ತಂಡದಲ್ಲಿ ದುಬಾರೆಯ ಆನೆಗಳು ಸೇರಿದಂತೆ ಒಟ್ಟು 8 ಆನೆಗಳನ್ನು ಗಜ ಪಯಣದಲ್ಲಿ ಈ ತಿಂಗಳ 26 ರಂದು ಸಾಗಲಿದೆ.
ಎರಡನೇ ತಂಡದಲ್ಲಿ ದೊಡ್ಡ ಹರವೆ ಶಿಬಿರದ ರೂಪ ಸೇರಿದಂತೆ ನಾಲ್ಕು ಆನೆಗಳನ್ನು ಕಳುಹಿಸಲು ನಿರ್ಧರಿಸಲಾಗಿದೆ.
ಕಳೆದ ಆರು ವರ್ಷಗಳಿಂದ ದಸರಾ ಉತ್ಸವದಲ್ಲಿ ಅಂಬಾರಿ ಹೊತ್ತು ಗಜ ಪಡೆ ಮುನ್ನಡೆಸಿದ ಕ್ಯಾಪ್ಟನ್ ಅಭಿಮನ್ಯುಗೆ ವಯೋಮಿತಿ ಹಿನ್ನೆಲೆಯಲ್ಲಿ ಈ ಬಾರಿ ಪಟ್ಟಿಯಿಂದ ಕೈ ಬಿಡಲಾಗಿದೆ.
ಈ ಹಿನ್ನೆಲೆಯಲ್ಲಿ ದುಬಾರೆಯ ಧನಂಜಯ ಅಥವಾ ಪ್ರಶಾಂತ ಗೆ ಈ ಬಾರಿ ಅಂಬಾರಿ ಆನೆಯಾಗಿ ಅವಕಾಶ ದೊರಕುವ ಸಾಧ್ಯತೆ ಹೆಚ್ಚಾಗಿದೆ. ಈ ಸಂಬಂಧ ಸದ್ಯದಲ್ಲಿಯೇ ಅಂತಿಮ ತೀರ್ಮಾನ ಹೊರ ಬೀಳಲಿದೆ.
ಈ ತಿಂಗಳ 26ರಂದು ಗಜಪಯಣಕ್ಕೆ ಚಾಲನೆ ಸಿಗಲಿದ್ದು ಮೊದಲ ಹಂತದ ಆನೆಗಳು, ಮೈಸೂರಿನತ್ತ ದುಬಾರೆ ಶಿಬಿರದ 5 ಆನೆಗಳು ಪ್ರಯಾಣ ಬೆಳೆಸಲಿವೆ.







