ಮಡಿಕೇರಿ ಮೇ 28 NEWS DESK : ಗರಗಂದೂರು “ಬಿ” ಗ್ರಾಮದ ಶ್ರೀ ಗುರು ಬಸವೇಶ್ವರ ದೇವಳದ ವಾರ್ಷಿಕ ಪೂಜೋತ್ಸವವು ಶ್ರದ್ಧಭಕ್ತಿಯಿಂದ ನಡೆಯಿತು.
ಮುಂಜಾನೆಯಿಂದ ಗಣಪತಿ ಹೋಮ, ಶ್ರೀ ದೇವರ ಮಹಾಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿತು. ನಂತರ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಗ್ರಾಮದ ವಿವಿಧಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ಸುಮಾರು 300 ವರ್ಷಗಳ ಹಳೆಯ ಶ್ರೀ ಗುರುಬಸವೇಶ್ವರ ದೇವಸ್ಥಾನವನ್ನು 2011ರ ಇಸವಿಯಲ್ಲಿ ರೋಹಿತ್ ಅವರ ಮುಂದಾಳತ್ವದಲ್ಲಿ ಮತ್ತು ಗ್ರಾಮಸ್ಥರ ಹಾಗೂ ದಾನಿಗಳ ನೆರವಿನಲ್ಲಿ ಜೀರ್ಣೋದ್ಧಾರ ಮಾಡಲಾಯಿತು.
2011 ರಿಂದ ಇಂದಿನವರೆಗೂ ಸಿ.ಕೆ.ರೋಹಿತ್ ಅವರು ದೇವಾಲಯ ಸಮಿತಿಯ ಅಧ್ಯಕ್ಷತೆ ವಹಿಸಿಕೊಂಡಿದ್ದು, ಪ್ರಸ್ತುತ ಸಾಲಿನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕೆ.ಡಿ.ವೀರಪ್ಪ, ಖಜಾಂಜಿಯಾಗಿ ಲಿಖಿತ್ ದಾಮೋದರ್, ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪ ಗ್ರಾಮಗಳಿಂದ 13 ಜನ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.